ಶಿವಮೊಗ್ಗ, ಜು.12:
ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಭದ್ರಾ ಮೇಲ್ದಂಡೆ ಪೂರ್ವಭಾವಿ ಸಭೆಯಲ್ಲಿ ಅತ್ಯಂತ ಮಹತ್ತರವಾದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭದ್ರಾ ಜಲಾಶಯದಿಂದ ಸರಕಾರ 29.9 ಟಿ.ಎಂ.ಸಿ ನೀರು ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡಿದ್ದು, ಅದರಲ್ಲಿ 12.5 ಟಿ.ಎಂ.ಸಿ ನೀರು ಭದ್ರಾಜಲಾಶಯದಿಂದ, ಹಾಗೂ ತುಂಗಾ ಜಲಾಶಯದಿಂದ 17. 5 ಟಿ.ಎಂ.ಸಿ ನೀರು ತೆಗೆದುಕೊಳ್ಳಲು ಆದೇಶ ನೀಡಿದೆ.
ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಭದ್ರಾ ಅಚ್ಚು ಕಟ್ಟು ಪ್ರದೇಶದ ರೈತರು ಸಮಸ್ಯೆ ಎದುರಿಸಲಿದ್ದಾರೆ, ಆದ್ದರಿಂದ ಸರಕಾರ ಈ ಕೂಡಲೆ ಈ ನಿರ್ಧಾರವನ್ನು ಬದಲಿಸಿ, ತುಂಗಾ ಜಲಾಶಯದಿಂದ ರೈತರಿಗೆ ಉಪಯೋಗವಾಗದೆ ಆಂಧ್ರ ಪ್ರದೇಶಕ್ಕೆ ಹರಿದು ಹೋಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿ. ಈ ನೀರನ್ನು ಬಳಸಿಕೊಳ್ಳುವುದರಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂಬ ಎಲ್ಲಾ ರೈತ ಮುಖಂಡರ ನಿರ್ಣಯದಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮನವರಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ಅಧ್ಯಕ್ಷತೆಯನ್ನು ಮಾನ್ಯ ಶಾಸಕ ಎಸ್.ಎ ರವೀಂದ್ರನಾಥ ರವರು ವಹಿಸಿದ್ದರು, ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ಹರಿಹರ ಶಾಸಕ ಎಸ್ ರಾಮಪ್ಪ, ಮಾಜಿ ಶಾಸಕರಾದ ಶಾಂತನ ಗೌಡ ರವರು, ಬಸವರಾಜ್ ನಾಯ್ಕ್, ಹಾಜರಿದ್ದರು. ಮಹಾಮಂಡಲದ ಅಧ್ಯಕ್ಷರಾದ ವೈ ದ್ಯಾವಪ್ಪ ರೆಡ್ಡಿ ರವರು,ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹೆಚ್.ಆರ್ ಲಿಂಗರಾಜ್ ಶ್ಯಾಮನೂರು ರವರು,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ತೇಜಸ್ವಿ ಪಟೇಲ್ ರವರು, ನಿರ್ದೇಶಕರಾದ ಎಂ ಗಿರೀಶ್ ರವರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೀರೇಶ್ ರವರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕರಿಬಸಪ್ಪ, ಬಿ.ಜಿ ನಾಗರಾಜ್, ಎ.ಎಂ ಮಂಜುನಾಥ್ ಸಿರಿಮಗೊಂಡನಹಳ್ಳಿ, ಮತ್ತು ರೈತ ಮುಖಂಡರು ಹಾಜರಿದ್ದರ