ಶಿವಮೊಗ್ಗ,
ಲೋಕ್ ಅದಾಲತ್ ನಿಂದ ಕಕ್ಷಿದಾರ ರಿಗೆ ಸಾಕಷ್ಟು ಅನುಕೂಲಗಳಿವೆ. ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹ ರಿಸಿಕೊಳ್ಳುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ ಎಂದು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫ ಹುಸೇನ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ನ್ಯಾಯಾಲಯ ದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಲೋಕ್ ಅದಾಲ ತ್‌ನಲ್ಲಿ ರಾಜೀ ಸಂಧಾನದ ಮೂಲಕ ೧೦,೦೭೦ ಪ್ರಕರಣಗಳು ವಿಲೇವಾರಿ ಮಾಡಲಾಗುತ್ತಿದೆ. ಇನ್ನೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಶರತ್ ಎಂಬ ಯುವಕನ ಕುಟುಂಬಕ್ಕೆ ೨೮ ಲಕ್ಷ ರೂ. ಪರಿಹಾರದ ಚೆಕ್ ಅನ್ನು ಇಂದು ನೀಡುತ್ತಿದ್ದೇವೆ
. ೨೦೨೧ ರ ಫೆ. ೨೦ ರಂದು ನಡೆದ ಈ ಅಪಘಾತ ಪ್ರಕರಣ ಲೋಕ್ ಅದಾಲತ್ ನಲ್ಲಿ ೧.೪ ತಿಂಗಳೊಳಗೆ ರಾಜೀ ಸಂಧಾನದ ಮೂಲಕ ಪರಿಹಾರ ಸಿಕ್ಕಿದೆ. ಇದರಿಂದ ಕುಟುಂಬಕ್ಕೂ ಅನುಕೂಲವಾ ಗಿದೆ. ಇಲ್ಲಿ ಪರಿಹಾರ ಅವಾರ್ಡ್ ಆದ ಬಳಿಕ ಮೇಲಿನ ಕೋರ್ಟ್ ನಲ್ಲಿ ಚಾಲೆಂಗ್ ಗೆ ಅವಕಾಶವಿಲ್ಲ. ಕಡಿಮೆ ಅವಧಿಯಲ್ಲಿ ತೀರ್ಮಾನವಾಗಿರುವುದು ಲೋಕ್ ಅದಾಲತ್ ನ ವಿಶೇಷತೆ ಎಂದರು.
ಸಾಕಷ್ಟು ಕಕ್ಷಿದಾರರು ಮತ್ತು ಬ್ಯಾಂಕರ್ಸ್ ಗಳು, ವಿಮಾ ಕಂಪನಿಗಳು ಲೋಕ್ ಅದಾಲತ್‌ನ ಉಪಯೋಗ ಪಡೆದುಕೊಳ್ಳುತ್ತಿ ದ್ದಾರೆ. ಎಲ್ಲರಿಗೂ ಕಾನೂನಿನ ಅರಿವು ಮೂಡಿಸುವುದು ಮತ್ತು ಅಗತ್ಯವುಳ್ಳವರಿಗೆ ಉಚಿತ ಕಾನೂನು ನೆರವು ನೀಡುವುದು ಲೋಕ್ ಅದಾಲತ್ ಮೂಲಕ ರಾಜೀ ಸಂಧಾನ ನಡೆಸಿ ಶೀಘ್ರ ಪರಿಹಾರ ನೀಡು ವುದು ಮೂರು ಅಂಶಗಳನ್ನು ಕಾನೂನು ಸೇವಾ ಪ್ರಾಧಿಕಾರ ಹೊಂದಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ೪ -೫ ವರ್ಷಗಳು ನ್ಯಾಯಾಲ ಯಕ್ಕೆ ಓಡಾಡುವ ಪ್ರಕರಣಗಳು ಲೋಕ್ ಅದಾಲತ್ ನಲ್ಲಿ ತೀರ್ಮಾನ ಆಗಿರುವ ಸಾವಿರಾರು ಉದಾಹರಣೆಗಳಿವೆ. ಅಪಘಾತ ಕ್ಕೀಡಾದಾಗ ಮನೆಯ ಯಜಮಾನನ್ನು ಕಳೆದುಕೊಂಡು ಅಥವಾ ದುಡಿಯುವ ಮಗನನ್ನು ಕಳೆದುಕೊಂಡಾಗ ಆ ಮನೆಯ ಪರಿಸ್ಥಿತಿ ಏನಾಗಬಹುದು? ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿತ್ತು. ಈಗ ಅದಕ್ಕೆ ಲೋಕ್ ಅದಾಲತ್ ನೆರವು ನೀಡುತ್ತಿದೆ. ವಕೀಲರಿಗೂ ಶುಲ್ಕ ನೀಡುವ ಅವಶ್ಯಕತೆ ಇಲ್ಲ. ಕಕ್ಷಿದಾರರಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣವರ್ ಮೊದಲಾದವರಿದ್ದರು.