ಶಿವಮೊಗ್ಗ,ಜೂ.24:
ಕಳೆದ ಏಳುತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಗಾಡಿಕೊಪ್ಪದ ಯುವಕ ಹೃದಯಾಘಾತದಿಂದ ಮೃತರಾದ ದುರಂತದ ಘಟನೆ ನಡೆದಿದೆ.
ನಗರದ ಗಾಡಿಕೊಪ್ಪ ವಾರ್ಡಿನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ರಾಜಣ್ಣ ಅವರ ಪುತ್ರ ಅನಿಲ್ ಕಳೆದ ರಾತ್ರಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 28 ವರ್ಷವಾಗಿತ್ತು.
ನಿನ್ನೆ ರಾತ್ರಿ ಗಾಡಿಕೊಪ್ಪದಲ್ಲಿರುವ ತಮ್ಮ ಹೊಟೆಲ್ನ್ನು ಬಂದ್ ಮಾಡಿ ಮನೆಗೆ ಬಂದು ಕೈಕಾಲು ತೊಳೆದು ಒಳಬರುತ್ತಿದ್ದಂತೆಯೇ ಕುಸಿದುಬಿದ್ದರು. ಕೂಡಲೆ ಅವರನ್ನು ಪಕ್ಕದಲ್ಲಿರುವ ನಂಜಪ್ಪ ಲೈಫ್ ಕೇರ್ಗೆ ಕರೆದೊಯ್ಯಲಾಯಿತಾದರೂ ಆಗಲೇ ಮೃತರಾಗಿದ್ದರು.
ಅನಿಲ್ ಏಳು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮೃತರು ಪತ್ನಿ, ತಂದೆ-ತಾಯಿ ಸೇರಿದಂತೆ ಅಪಾರ ಮಿತ್ರರನ್ನು ಅವರು ಅಗಲಿದ್ದಾರೆ.
ಸಂತಾಪ: ಅನಿಲ್ ಆಕಸ್ಮಿಕ ನಿಧನಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿ, ಅನಿಲ್ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಹಾರೈಸಿದ್ದಾರೆ.