ಶಿವಮೊಗ್ಗ,ಜೂ.25:
ಹಳ್ಳಿಗಳಲ್ಲಿ ಘನ ತ್ಯಾಜ್ಯ ಘಟಕಗಳನ್ನು ನಿರ್ಮಿಸುವುದು ಕೇಂದ್ರ ಸರಕಾರದ ಕನಸಿನ ಕೂಸು, ಅದಿಂದು ಪ್ರತಿ ಹಳ್ಳಿಗಳಲ್ಲೂ ನನಸಾಗುತ್ತಲಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೆ.ಬಿ ಪವಿತ್ರ ರಾಮಯ್ಯ ತಿಳಿಸಿದರು.


ಅವರು ಇಂದು ಸನ್ಯಾಸಿ ಕೋಡಮಗ್ಗಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಗುದ್ದಲಿ ಪೂಜೆ ಮತ್ತು ಘನ ತ್ಯಾಜ್ಯ ಮತ್ತು ಮಿನಿ ಅಂಗನವಾಡಿ ಕೇಂದ್ರ, ಕನಸಿನಕಟ್ಟೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ ನಿರ್ಮಾಣಗೊಂಡಿರುವುದು ಹಳ್ಳಿಗಳಿಂದ ಎಂಬ ಮಾತಿದೆ, ಅದೇ ರೀತಿ ಒಂದು ದೇಶ ಸಮೃದ್ಧವಾಗಿ ಬೇಳೆಯಬೇಕೆಂದರೆ ಹಳ್ಳಿಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಮುಖ್ಯವಾಗುತ್ತದೆ.
ಆದ್ದರಿಂದ ಈ ರೀತಿಯ ಸರಕಾರದ ಯೋಜನೆಗಳ‌ನ್ನು ರೈತರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸ್ಥಳೀಯವಾಗಿ ನಮ್ಮ ಜೊತೆ ಉತ್ತಮ ಹಾಗೂ ಜನಸ್ನೇಹಿ ನಾಯಕರುಗಳು ಇದ್ದಾರೆ, ಮುಂದಿನ ದಿನಗಳಲ್ಲಿ ಖಂಡಿತಾ ನಮ್ಮ ಪಕ್ಷದಿಂದ ಜಿಲ್ಲೆಗೆ ಉತ್ತಮವಾದ ಯೋಜನೆಗಳನ್ನು ತರಲು ಶ್ರಮಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್ ರವರು, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್, ರುದ್ರೆಗೌಡ .ಎಸ್, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಷಡಾಕ್ಷರಪ್ಪ ಗೌಡ ಎನ್.ಪಿ ರವರು, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶಪ್ಪ ಬಿ.ಎಂ ರವರು, ಉಪಾಧ್ಯಕ್ಷ ರಾದ ನೀಲಮ್ಮ ರವಿ ರವರು ಮತ್ತು ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!