ಶಿವಮೊಗ್ಗ: ಯಾವ ಮಂತ್ರಿಯೂ ಬದಲಾವಣೆ ಯಾಗಲ್ಲ ಇದು ಬರೀ ಕಾಂಗ್ರೇಸಿಗರ ಸೃಷ್ಟಿ ಸಿಎಂ ಬದಲಾವಣೆ ಬಗ್ಗೆ ಬಹಳ ದಿನದಿಂದ ಹೇಳಲಾಗುತ್ತಿದೆ. ಹಿರಿಯ ಮಂತ್ರಿಗಳನ್ನು ಬಿಡ್ತಾರೆ. ಹೊಸಬರನ್ನು ಸಂಪುಟಕ್ಕೆ ತಗೋತಾರೆ. ಇವತ್ತು, ನಾಳೆ, ನಾಡಿದ್ದು, ಬದಲಾವಣೆ ಆಗುತ್ತೆ. ಹೀಗೆ ಯುಗಾದಿ, ಸಂಕ್ರಾಂತಿ, ದಸರಾ ಎಲ್ಲವೂ ಬಂದು ಹೋಗಿದೆ.
ಆದರೆ ಯಾವ ಮಂತ್ರಿಯೂ ಬದಲಾವಣೆ ಅಗಿಲ್ಲ, ಇವೆಲ್ಲಾ ಕೇವಲ ಊಹಾಪೋಹ. ಬರೀ ಸೃಷ್ಟಿ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಅನ್ನೋದು ಸಣ್ಣ ವಿಚಾರ ಅಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಅಗಿದೆ. ರಾಜ್ಯದ ಜನ ಮೆಚ್ಚುತ್ತಿದ್ದಾರೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ನೂರಾರು ಗೊಂದಲ ಸೃಷ್ಟಿಸುತ್ತಿದೆ. ಸಿಎಂ ಬದಲಾವಣೆ ವಿಚಾರವೂ ಇವರದೇ ಸೃಷ್ಟಿ. ಕಾಂಗ್ರೆಸ್ ನವರು ಇಲ್ಲದೇ ಇರೋ ಗೊಂದಲ ಸೃಷ್ಟಿ ಮಾಡ್ತಾರೆ ಎಂದರು.
ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಹೊರಗೇ ಬರ್ತಾ ಇರಲಿಲ್ಲ. ಮುಚ್ಚಿ ಹಾಕುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಹಾಗೆ ಮಾಡಿಲ್ಲ. ಇಡೀ ಅಕ್ರಮದ ಸಮಗ್ರ ತನಿಖೆ ನಡೆಸುತ್ತಿದೆ. ಇದು ಕಾಂಗ್ರೆಸ್‌ನವರಿಗೆ ಸಹ್ಯವಾಗುತ್ತಿಲ್ಲ. ಇವತ್ತು ಯಾವುದೇ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಹ ನಿಂತಿಲ್ಲ. ಜನ ಸಹ ಸರ್ಕಾರದ ಕಾರ್ಯದ ಬಗ್ಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್‌ನವರು ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.