ಶಿವಮೊಗ್ಗ, ಏ.13;
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿಯಾಗಿರುವ ಕೆಎಸ್ ಈಶ್ವರಪ್ಪ ಅವರ ವಿರುದ್ದದ ದೂರಿನಲ್ಲಿ 306 ಸೆಕ್ಷನ್ ಅನ್ವಯ ಜಾಮೀನು ರಹಿತ ದೂರು ದಾಖಲಾಗಿದ್ದು, ಅವರನ್ನು ಕೂಡಲೇ ಪೊಲೀಸರು ಬಂಧಿಸಬೇಕೆಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆಬಿ ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಅಧಿಕಾರದ ದಾಹದಿಂದ ಕುಳಿತು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿರುವ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಇಡೀ ಪ್ರಕರಣದಲ್ಲಿ ಲಂಚವೇ ಪ್ರಮುಖವಾಗಿದೆ. ಹಿಂದಿನ ಚುನಾವಣೆ ಪೂರ್ವದಲ್ಲಿ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಾಗ ನೋಟು ಎಣಿಸುವ ಯಂತ್ರಗಳ ಪತ್ತೆ, ವಿದೇಶದಲ್ಲಿ ವ್ಯವಹಾರ ಮಾಡಿರುವ ಸಂಗತಿ ಜಗಜ್ಜಾಹೀರಾಗಿದೆ. ಅವರು ನಾನ್ ಕರೆಪ್ಟೀವ್ ಏನಲ್ಲ. ಹಾಗಾಗಿ ತಕ್ಕಣ ಕ್ರಮ ಕೈಗೊಳ್ಳಬೇಕೆಂದರು.
ಇಡೀ ಪ್ರಕರಣದ ತನಿಖೆ ಯಾವುದೇ ಹಾಗೂ ಯಾರದೇ ಹಸ್ತಕ್ಷೇಪವಿಲ್ಲದೇ ನಡೆಯಬೇಕು. ಹಾಲಿ ಹೈಕೋರ್ಟ್ ಮುಖ್ಯ ನ್ಯಾಯಾದೀಶರಿಂದ ತನಿಖೆ ನಡೆಸಲು ಆಗ್ರಹಿಸಿದರು.