ಶಿವಮೊಗ್ಗ, ಏ.13:
ಏನೂ ತಪ್ಪಿಲ್ಲದೇ ಸುಮ್ಮನೆ ರಾಜೀನಾಮೆ ಕೇಳಿದರೆ ಹೇಗೆ? ಯಾವ ಕಾರಣಕ್ಕೆ ರಾಜೀನಾಮೆ ನೀಡಲಿ. ಆ ಪ್ರಶ್ನೆಯೇ ನನ್ನ ಮುಂದಿಲ್ಲ. ಈ ಬಗ್ಗೆ ನಾನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರ ಬಳಿ ಮಾತನಾಡಿದ್ದೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ಹೇಳಿದರು.
ಅವರಿಂದು ಮದ್ಯಾಹ್ನ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾಟ್ಸಪ್ ನಲ್ಲಿರುವ ಟೈಪಿಂಗ್ ಪ್ರತಿ ಹೇಗೆ ಡೆತ್ ನೋಟ್ ಆಗುತ್ತೆ. ಅದನ್ನು ಯಾರು ಟೈಪ್ ಮಾಡಿದರು. ಅದರಲ್ಲಿ ಸಹಿ ಇದೆಯಾ…? ಎಂದು ಪ್ರಶ್ನಿಸಿದರು.


ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ ಐದಾರು ಹಂತದ ಪ್ರಕ್ರಿಯೆಗಳಿವೆ. ಅದರ ಯಾವ ಪ್ರಕ್ರಿಯೆಯಲ್ಲಿಯೂ ಸಂತೋಷ್ ಹೆಸರಿಲ್ಲ. ನಾ ಆತನನ್ನು ನೋಡಿಯೇ ಇಲ್ಲ ಎಂದರು.
ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಹಾಗೂ ಹಿಂದೆ ಬಹಳಷ್ಟು ಸಚಿವರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವರ್ಕ್ ಆರ್ಡರ್ ಕೊಡದೇ ಬಿಲ್ ಪೇಮೆಂಟ್ ಮಾಡಿದ್ದರಾ? ಹಾಗೇ ಬರುತ್ತಾ? ಈಗ ರಾಜೀನಾಮೆ ಯಾಕೆ ಕೇಳುತ್ತೀರಿ? ರಾಜಕೀಯ ಬಿಡಿ ಎಂದರು.
ಹಿಂದೆ ಗಣಪತಿ ಸಾವಿನಲ್ಲಿ ಅವರ ಸ್ವ ಹಸ್ತಾಕ್ಷರದ ಡೆತ್ ನೋಟ್ ಇತ್ತು. ಅದರ ಸಾಕ್ಷಿ ಬೇರೆ ಇದು ಬೇರೆ? ನನ್ನ ಹೆಸರನ್ನು ಈ ಕೇಸಲ್ಲಿ ಹೇಗೆ ಸೇರಿಸಿದರೂ ಗೊತ್ತಿಲ್ಲ. ಕೋರ್ಟ್ ನಲ್ಲಿ ನೋಡಿಕೊಳ್ತೇನೆ. ಓಡಿ ಹೋಗೊಲ್ಲ ಎಂದು ಹೇಳಿದರು.


ನಮ್ಮ ಇಲಾಖೆಯಲ್ಲಿ ಸಂತೋಷ್ ಯಾವ ಕೆಲಸ ಪಡೆದ ಸಾಕ್ಷಿ ಇಲ್ಲ. ದೆಹಲಿಯಲ್ಲಿ ಸುಮ್ಮನೆ ದೂರು ನೀಡಿ ಬಂದದ್ದಕ್ಕೆ ಇಲಾಖೆಯ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಟಿವಿ 18 ಹಾಗೂ ಸಂತೋಷ್ ವಿರುದ್ದ ಮಾನನಷ್ಟ ಮೊಕದ್ದಮೆ ನೀಡಿರುವುದು ದಾಖಲಾಗಿ ನೋಟೀಸ್ ನೀಡಿರುವುದಕ್ಕೆ ಸಂತೋಷ್ ಹೆದರಿ ಆತ್ಮಹತ್ಯೆ ಮಾಡಿಕೊಂಡರಾ ಗೊತ್ತಿಲ್ಲ ಎಂದರು.
ನನ್ನ ವಿರುದ್ದದ ಪ್ರತಿಭಟನೆ ಹಾಗೂ ನನ್ನನ್ನು ಸಿಕ್ಕಿಸುವ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ. ಅಮೂಲಾಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದರು.
ನನಗೆ ಹೈಕಮಾಂಡ್ ನಿಂದ ಯಾರೂ ಮಾತನಾಡಿಲ್ಲ.ಸಿಎಂ ಅವರನ್ನು ನಾಳೆ ಅಥವಾ ನಾಡಿದ್ದು ಬೇಟಿ ಮಾಡುವೆ. ಯಾವುದೇ ರೀಜನ್ ಗಳಿಲ್ಲದೇ ಯಾಕೆ ರಾಜೀನಾಮೆ ನೀಡಲಿ. ಅದು ಸಾಧ್ಯವೇ ಇಲ್ಲ ಎಂದರು.
ಇಂತಹ ಷಡ್ಯಂತ್ರಗಳ ನೂರಾರು ಕೇಸುಗಳನ್ನು ನೋಡಿದ್ದೇನೆ. ಸಂತೋಷನನ್ನೇ ನೋಡಿಲ್ಲ ಎಂದ ಮೇಲೆ ಅವರ ಮನೆಯವರನ್ನೆಲ್ಲಿ ಎಲ್ಲಿ ನೋಡಲಿ. ಆರೋಪಕ್ಲೆ ಸಾಕ್ಷಿಯೇ ಇಲ್ಲ ಎಂದರು.
ಶಿವಮೊಗ್ಗ ನಗರದಲ್ಲಿ ಒಂದೇ ಒಂದು ಗಲಾಟೆಗೆ ನಾನು ಕಾರಣವಾಗಿಲ್ಲ. ಪತ್ರಕರ್ತರಾದ ನೀವು ನೋಡಿದ್ದೀರಿ. ಶಾಂತಿ ಕಾಪಾಡಲು ಪ್ರಯತ್ನಿಸಿದ್ದೇನೆ. ಅಂತಹ ತಪ್ಪಿದ್ದರೆ ನೀವು ಹೇಳಿ, ರಾಜೀನಾಮೆ ನೀಡುತ್ತೇನೆ ಎಂದ ಈಶ್ವರಪ್ಪ ಅವರು ಮುಸ್ಲಿ ಸಮಾಜದ ಹಿರಿಯರಿಗೆ ನಿಮ್ಮಲ್ಲಿನ ಮುಗ್ದರಿಗೆ ಬುದ್ದಿ ಹೇಳಿ, ಶಾಂತವಾಗಿರೋಣ. ಕಾಂಗ್ರೆಸ್ ಓಟಿಗಾಗಿ ನಿಮ್ಮನ್ನು ಬಳಸಿಕೊಳ್ತಿದೆ. ಯಾವತ್ತು ಕೈ ಕೊಡುತ್ತೊ ಗೊತ್ತಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಡಿ.ಎಸ್. ಅರುಣ್, ಅಧ್ಯಕ್ಷ ಮೇಘರಾಜ್, ಪ್ರಮುಖರಾದ ದತ್ತಾತ್ರಿ, ಚಬ್ಬಬಸಪ್ಪ, ಸುಭಾಷ್ ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!