ಶಿವಮೊಗ್ಗ: ಹೊಸನಗರ ತಾಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಪಂ  ಕಾರ್‍ಯದರ್ಶಿ ಲಂಚ ತೆಗೆದುಕೊಳ್ಳುವಾಗ ಮಂಗಳವಾರ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ದವರ ಬಲೆಗೆ ಬಿದ್ದಿದ್ದಾರೆ.


 ಪ್ರಭಾರ ಪಿಡಿಒ ಆಗಿ ಕೂಡ ಕೆಲಸ ನಿರ್ವಹಿಸುತ್ತಿದ್ದ ಕಾರ್‍ಯದರ್ಶಿ ಮುರುಗೇಶ್ ಭೂಪರಿವರ್ತನೆಗೊಂಡ 10 ಗುಂಟೆ ಜಾಗದ ಯೋಜನಾ ಅನುಮತಿ  ಮತ್ತು ಮ್ಯುಟೇಶನ್ ಮಾಡಿಕೊಡಲು ಸ್ಥಳೀಯರೊಬ್ಬರಿಂದ ಒಂದು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 20 ಸಾವಿರ ರೂ. ಕೊಡಬೇಕೆಂದು ಸೂಚಿಸಿದ್ದರು.
ಈ ಪ್ರಕಾರ ಮಂಗಳವಾರ ಮಧ್ಯಾಹ್ನ 20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದರು.

ಬಂಧಿಸಿದ ಬಳಿಕ  ತನಿಖೆ ನಡೆಸಲಾಗುತ್ತಿದೆ.  ಶಿವಮೊಗ್ಗ ಭ್ರ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಜೆ. ಲೋಕೇಶ, ಸಿಪಿಐ  ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು..

By admin

ನಿಮ್ಮದೊಂದು ಉತ್ತರ

You missed

error: Content is protected !!