ಶಿವಮೊಗ್ಗ,. ಮಾ.26:
ಶಿವಮೊಗ್ಗ ನಗರದ ವಾರ್ಡ್ ನಂ.೦1ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿರುವ ಹೈಮಾಸ್ಕ್ ಹಾಗೂ ಬೀದಿ ದೀಪ ಹಾಕಲು ಹೋದರೆ ತಿಥಿ ಊಟ ಗ್ಯಾರೆಂಟಿ!
ಇದೊಂದು ಮಾತು ಹೌದು ಎನ್ನಲು ಕಾರಣ ಸಾಕಷ್ಟಿವೆ. ಕಂಬದಲ್ಲಿರುವ ಹಳೆ ಡಬ್ಬ ಹಾಗೂ ಕಿತ್ತು ಹೋದ ಮೀಟರ್, ವೈರ್ಗಳನ್ನು ನೋಡಿದಾಕ್ಷಣ ಬೀದಿ ದೀಪಗಳನ್ನು ಹಾಕಲು ಬಂದವ ಅದೇಗೆ ಹಾಕುತ್ತಾನೋ ದೇವರೇ ಬಲ್ಲ.
ಈ ಬೀದಿ ದೀಪ ಹಾಗೂ ಸ್ವಿಚ್ ಸಮೀಪದಲ್ಲಿಯೇ ಮನೆಗಳು ಮತ್ತು ಶಾಲೆಯೂ ಸಹ ಇದೆ. ಏನಾದರೂ ಅನಾಹುತಾ ಸಂಭವಿಸುವ ಮೊದಲು ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್ನ ಜನರು ಮನವಿ ಮಾಡಿದ್ದಾರೆ.