ಪರೀಕ್ಷೆಗೆ ಸಿದ್ದರಾದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶಿವಮೊಗ್ಗ ಬೆಸ್ಟ್ ಸಂಸ್ಥೆಯಿಂದ ಬೆಸ್ಟ್ ಆಫ್ ಲಕ್ (BEST OF LUCK)

ಶಿವಮೊಗ್ಗದ ಬೆಸ್ಟ್ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ನ ಶುಭಕೋರಲು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊನೆ ಕ್ಷಣದ ಮಾಹಿತಿ ನೀಡುವ ಉದ್ದೇಶದ ಮಹತ್ತರ ಕಾರ್ಯಕ್ರಮ ಆಯೋಜಿಸಲಾಗಿದೆ.
ಬರುವ ಸೋಮವಾರದಿಂದ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭವಾಗುತ್ತಿದ್ದು, ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳು ಗಾಬರಿಗೊಳ್ಳುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಯಾವ ರೀತಿ ಇದ್ದರೆ ಒಳ್ಳೆಯದು ಎಂಬುದನ್ನು ತಿಳಿಸುವ ಸಲುವಾಗಿ ಈ ಮಾಹಿತಿ ನೀಡಲಾಗಿದೆ.

ಪರೀಕ್ಷೆಯ ಹಿಂದಿನ ದಿನ :


೧. ಇದುವರೆಗೂ ನೀವು ಓದದೇ ಇರುವ ಯಾವುದೇ ವಿಷಯವನ್ನು ಹೊಸದಾಗಿ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಡಿ.
೨.ಇದುವರೆಗೂ ನೀವು ಅರ್ಥ ಮಾಡಿಕೊಂಡಿರುವ ಮತ್ತು ನೆನಪಿನಿಂದ ಹೊರಗಿರುವ ವಿಷಯಗಳನ್ನು ಪುನರ್ ಮನನ ಮಾಡಲು ಪ್ರಯತ್ನಿಸಿ.
೩.ಯಾವುದೇ ಕಾರಣಕ್ಕೂ ಪರೀಕ್ಷೆಯ ಕುರಿತು ಆತಂಕ ಗೊಳ್ಳುವುದು ಬೇಡ. ಎಲ್ಲರಿಗೂ ಪರೀಕ್ಷಾ ಆತಂಕ ಇರುವುದು ಸಹಜ.
೪.ಈಗಾಗಲೇ ನಡೆದಿರುವ ಪೂರ್ವ ಸಿದ್ಧತಾ ಪರೀಕ್ಷೆಯ ಮಾದರಿಯಲ್ಲಿಯೇ ವಾರ್ಷಿಕ ಪರೀಕ್ಷೆ ನಡೆಯುವುದರಿಂದ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆಗಳನ್ನು ಮತ್ತೊಮ್ಮೆ ಪುನರ್ಮನನ ಮಾಡಿಕೊಳ್ಳಿ.
೫.ಪ್ರಮುಖ ವಿಷಯ ಅಂಶಗಳನ್ನು ಸೂತ್ರಗಳನ್ನು ಚಿತ್ರಗಳನ್ನು ಮತ್ತೊಮ್ಮೆ ನಿಧಾನವಾಗಿ ಓದಿಕೊಳ್ಳಿ.
೬.ನಿಮ್ಮ ಶಿಕ್ಷಕರು ಪಠ್ಯದ ಯಾವ ಯಾವ ಅಂಶಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿರುತ್ತಾರೋ ಅವುಗಳ ಕಡೆಗೆ ಮತ್ತೊಮ್ಮೆ ಕಣ್ಣಾಯಿಸಿ.
೭.ಪರೀಕ್ಷೆಗೆ ಅಗತ್ಯವಾಗಿ ತೆಗೆದುಕೊಂಡು ಹೋಗಬೇಕಾದ ಪೆನ್ನು ಪೆನ್ಸಿಲ್ ಸ್ಕೆಚ್ ಜಾಮಿಟ್ರಿ ಬಾಕ್ಸ್‌ಗಳನ್ನು ಅಡ್ಮಿಷನ್ ಟಿಕೆಟ, ಕಾರ್ಡ್ ಬೋಡ, ಕುಡಿಯುವ ನೀರಿನ ಬಾಟಲ್ ಇವುಗಳನ್ನು ಸಿದ್ಧಪಡಿಸಿಕೊಳ್ಳಬೇಕು.
೮.ಮುಳ್ಳುಗಳಿರುವ ಕೈಗಡಿಯಾರ ಅನಲಾಗ್ ವಾಚ್ ಅನ್ನು ಸಾಧ್ಯವಾದರೆ ಸಿದ್ದವಾಗಿಟ್ಟುಕೊಳ್ಳಿ.
೯.ಯಾವುದೇ ಕಾರಣಕ್ಕೂ ಡಿಜಿಟಲ್ ವಾಚುಗಳು ಸ್ಮಾರ್ಟ್ ವಾಚ್ ಗಳನ್ನು ತೆಗೆದುಕೊಂಡು ಹೋಗಬೇಡಿ.
೧೦.ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಗೆ ಸಂಬಂಽಸಿದ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ.
೧೧.ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸಿ. ೧೨.ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವ ಆತ್ಮವಿಶ್ವಾಸದೊಂದಿಗೆ ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ನಿದ್ರಿಸಿ.
ಪರೀಕ್ಷಾ ದಿನದಂದು :
೧.ಪ್ರತಿ ದಿನದಂತೆ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ.
೨.ಲಘು ಉಪಹಾರವನ್ನು ಸೇವಿಸಿ.
೩.ಪರೀಕ್ಷೆಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡಿರುವುದರ ಬಗ್ಗೆ ಮತ್ತೊಮ್ಮೆ ಖಾತ್ರಿಪಡಿಸಿ ಪಡಿಸಿ ಕೊಳ್ಳಿ.
೪.ಕನಿಷ್ಠ ಒಂದು ಗಂಟೆ ಮೊದಲು ನಿಮ್ಮ ಪರೀಕ್ಷಾ ಕೇಂದ್ರವನ್ನು ತಲುಪಿ.
೫.ಯಾವುದೇ ಆತಂಕ ಇಲ್ಲದೆ ರಿಲ್ಯಾಕ್ಸ್ ಆಗಿ ಪರೀಕ್ಷಾ ಕೊಠಡಿಯನ್ನು ತಲುಪಿ ನಿಗದಿತ ಸ್ಥಳದಲ್ಲಿ ಕುಳಿತುಕೊಂಡು ಕಣ್ಮುಚ್ಚಿಕೊಂಡು ಒಂದೆರಡು ನಿಮಿಷ ಧ್ಯಾನ ಮಾಡಿ, ದೀರ್ಘವಾಗಿ ಉಸಿರಾಟ ನಡೆಸಿ.
೬.ಉತ್ತರ ಪತ್ರಿಕೆಯಲ್ಲಿ ಭರ್ತಿ ಮಾಡಬೇಕಾದ ನೊಂದಣಿ ಸಂಖ್ಯೆ ಇತ್ಯಾದಿಗಳನ್ನು ಗಡಿಬಿಡಿಯಿಲ್ಲದೆ ನಿಧಾನವಾಗಿ ತುಂಬಿ.
೭.ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಕೊಡಿ. ಮಾಸ್ ಧರಿಸಿ.

ಕೊಠಡಿಯಲ್ಲಿ ಪರೀಕ್ಷೆ ಬರೆಯುವಾಗ :


೧.ಕೊಠಡಿ ಮೇಲ್ವಿಚಾರಕರು ಸೂಚಿಸುವ ಕಡೆಯಲ್ಲಿ ಸಹಿ ಮಾಡಿ ಮತ್ತು ನಿಮ್ಮ ನೊಂದಣಿ ಸಂಖ್ಯೆ ಮತ್ತು ಉತ್ತರ ಪತ್ರಿಕೆಯ ಕ್ರಮ ಸಂಖ್ಯೆ ಗಳನ್ನು ಕ್ರಮಬದ್ಧವಾಗಿ ಬರೆಯಿರಿ.
೨.ನಿಮ್ಮ ಉತ್ತರಗಳು ನಿರ್ದಿಷ್ಟವಾಗಿ ಸ್ಪಷ್ಟವಾಗಿರಲಿ.
೩.ನೀವು ಎಷ್ಟು ಕಲಿತಿರುವಿರಿ ಎನ್ನುವುದಕ್ಕಿಂತ ಕಲಿತಿರುವಷ್ಟುನ್ನು ಅಚ್ಚುಕಟ್ಟಾಗಿ ಬರೆಯಿರಿ.
೪.ನಿಮ್ಮ ಉತ್ತರಗಳು ಆಕರ್ಷಕವಾಗಿ ಇರಲಿ.
೫.ಚಿತ್ರ ಬರೆಯಲು ಮಾತ್ರ ಪೆನ್ಸಿಲ್ ಬಳಸಿ.
೬.ಪೆನ್ನನ್ನು ಬದಲಿಸುವ ಅವಶ್ಯಕತೆ ಇದ್ದರೆ ಮೇಲ್ವಿಚಾರಕರಿಂದ ಅನುಮತಿಯನ್ನು ಪಡೆದುಕೊಳ್ಳಿ.
೭.ನಿಮಗೆ ಉತ್ತರಿಸಲು ಸುಲಭವಾಗಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ.
೮.ನಿಮಗೆ ಗೊಂದಲಕ್ಕೀಡು ಮಾಡುವ ಪ್ರಶ್ನೆಗಳ ಕುರಿತು ಪ್ರಾರಂಭದಲ್ಲಿ ಚಿಂತಿಸುತ್ತ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.
೯.ಉತ್ತರದಲ್ಲಿನ ಪ್ರಮುಖವಾದ ಅಂಶಗಳ ಕೆಳಗೆ ಗೆರೆ ಎಳೆಯಿರಿ.
೧೦.ಪ್ರಶ್ನೆಗಳ ಕ್ರಮಸಂಖ್ಯೆಯನ್ನು ತಪ್ಪದೆ ಸರಿಯಾಗಿ ಬರೆಯಿರಿ.
೧೧.ಬಹುಆಯ್ಕೆಯ ಪ್ರಶ್ನೆಗಳಿಗೆ ಒಂದು ಬಾರಿ ಮಾತ್ರ ಉತ್ತರಿಸಿ. ೧೨.ಹೆಚ್ಚುವರಿ ಪುಟಗಳನ್ನು ತೆಗೆದುಕೊಂಡಾಗ ಅದರಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ತಪ್ಪದೆ ಬರೆಯಿರಿ.


೧೩.ಹೆಚ್ಚುವರಿ ಪುಟಗಳನ್ನು ಮುಖ್ಯ ಪುಟದ ಪುಸ್ತಕದೊಂದಿಗೆ ಸರಿಯಾಗಿ ದಾರದಿಂದ ಕಟ್ಟಿ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯದಿಂದ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ ಶುಭ ಹಾರೈಸಲಾಗಿದೆ.
ರುದ್ರಸ್ವಾಮಿ, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಿದಿಗೆ ಇವರು ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಿದರು. ಅಡಿಕೆ ಮಂಡಿ ವರ್ತಕ ನಿಂಗರಾಜು.ಬಿ.ಎಸ್. ಎಂಎಸ್‌ಟಿ ಮಂಡಿ ಇವರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಂಸ್ಥೆಯ ಅವಶ್ಯಕತೆಯನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಮುಖ್ಯಸ್ಥ ಎಸ್.ರಂಗನಾಥಯ್ಯ ಎಫ್-.ಎಂ. ರೇಡಿಯೋ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾ, ವಿದ್ಯಾರ್ಥಿಗಳಿಗೆ ಬೆಸ್ಟ್ ಆ- ಲಕ್ ತಿಳಿಸಿದರು.
ಎಫ್ ಎಂ ರೇಡಿಯೋ ಶಿವಮೊಗ್ಗ ಸಂಸ್ಥೆಯ ಮುಖ್ಯಸ್ಥರಾದ ಜನಾರ್ಧನ್ ಹಾಗೂ ತಂಡದವರು ಕಾರ್ಯಕ್ರಮ ನಡೆಸಿಕೊಡುತ್ತ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

ಎಸ್.ರಂಗನಾಥಯ್ಯ, ಮುಖ್ಯಸ್ಥರು ಬೆಸ್ಟ್ ಸಂಸ್ಥೆ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

You missed

error: Content is protected !!