SMART CITY ಕಾರ್ಯ ಸಲೀಸಾದರೆ ಸೂಪರ್!

ವರದಿ: ರೇಣುಕೇಶ್, ಪತ್ರಕರ್ತರು

ಶಿವಮೊಗ್ಗ, ಮಾ. 27: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ, 100 ಸುಸಜ್ಜಿತ – ಹೈಟೆಕ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಸಾರ್ವಜನಿಕರಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇವುಗಳು ನಾಗರೀಕರ ಆಕರ್ಷಣೆಯ ಕೇಂದ್ರಬಿಂಧುವಾಗಿ ಪರಿಣಮಿಸಿವೆ.
ಬಸ್ ನಿಲ್ದಾಣಗಳನ್ನು ವಿನೂತನವಾಗಿ ನಿರ್ಮಿಸಲಾಗುತ್ತಿದೆ. ತ್ರಿಡಿ ಅಕ್ಷರದ ನಾಮಫಲಕ ಹಾಕಲಾಗುತ್ತಿದೆ. ಆಸನ ವ್ಯವಸ್ಥೆ, ಅಂಗವಿಲಕರು ನಿಲ್ದಾಣದ ಒಳ ಹೋಗಲು ರ್ಯಾಂಪ್ ವ್ಯವಸ್ಥೆ, ನಗರದ ಪ್ರಮುಖ ರಸ್ತೆಗಳಲ್ಲಿನ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ, ಡಿಜಿಟಲ್ ಡಿಸ್ ಪ್ಲೇ ಬೋರ್ಡ್, ಸಿಟಿ ಬಸ್ ಗಳ ವೇಳಾಪಟ್ಟಿ ವಿವರ, ಡಸ್ಟ್ ಬಿನ್, ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಉಳಿದಂತೆ ಎಲ್ಲ ಬಸ್ ನಿಲ್ದಾಣಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿ, ರಾತ್ರಿಯ ವೇಳೆ ಬೆಳಕಿನ ಸೌಲಭ್ಯ ಹಾಗೂ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.


ನವೀಕರಣ:


ನಗರದ ಹಲವೆಡೆ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ದಿ ಹಾಗೂ ಸಂಘಸಂಸ್ಥೆಗಳ ಅನುದಾನದಡಿ ನಿರ್ಮಿಸಲಾಗಿದ್ದ ಹಲವು ಬಸ್ ನಿಲ್ದಾಣಗಳು, ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದವು. ಅಂತಹ ತಂಗುದಾಣಗಳನ್ನು ಕೂಡ, ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಮೂಲಗಳು ಮಾಹಿತಿ ನೀಡುತ್ತವೆ. ಪೂರ್ಣ ಹಂತಕ್ಕೆ: ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಯಡಿ, 80 ಹೊಸ ಬಸ್ ನಿಲ್ದಾಣಗಳನ್ನು ನಗರದ ವಿವಿಧೆಡೆ ನಿರ್ಮಿಸಲಾಗುತ್ತಿದೆ. ಉಳಿದಂತೆ 20 ಹಳೇಯ ಬಸ್ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಇದರಿಂದ ನಗರದ ಪ್ರಮುಖರಸ್ತೆ, ಬಡಾವಣೆಗಳಲ್ಲಿ ಬಸ್ ನಿಲ್ದಾಣಗಳ ಕೊರತೆ ನೀಗಿದಂತಾಗಿದೆ.

ಸಕಲ ಸೌಕರ್ಯ:


ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ಸಿಟಿ ಬಸ್ ಗಳಿಗೆ ಜಿಪಿಎಸ್ ಆಧಾರಿತ ತಂತ್ರಜ್ಞಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗುತ್ತಿದೆ. ಇದರಿಂದ ಸಿಟಿ ಬಸ್ ಗಳು ಯಾವ ಪ್ರದೇಶದಲ್ಲಿ ಸಂಚರಿಸುತ್ತಿವೆ ಎಂಬುವುದರ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ಈ ವಿವರವನ್ನು ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಸ್ ಪ್ಲೇ ಬೋರ್ಡ್ ಗಳಲ್ಲಿ ಬಿತ್ತರವಾಗುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ತಾವು ಹೋಗುವ ಸ್ಥಳಗಳಿಗೆ ಯಾವಾಗ ಸಿಟಿ ಬಸ್ ಬರಲಿದೆ, ಪ್ರಸ್ತುತ ಆ ಬಸ್ ಯಾವ ಪ್ರದೇಶದಲ್ಲಿದೆ ಎಂಬುವುದರ ವಿವರ ಲಭ್ಯವಾಗಲಿದೆ.

ಶಿವಮೊಗ್ಗ ನಗರದ ಮಹಾನಗರ ಪಾಲಿಕೆ 1 ನೇ ವಾರ್ಡ್ ಸೋಮಿನಕೊಪ್ಪ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅನುದಾನದಡಿ ಈ ಹಿಂದೆ ನಿರ್ಮಿಸಲಾಗಿದ್ದ ಬಸ್ ನಿಲ್ದಾಣವು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆ ಆಗರವಾಗಿತ್ತು. ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಇಡೀ ಬಸ್ಲ್ದಾ ನಿಣವನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಲಾಗಿದೆ. ಚಿತ್ರ ಮೇಲಿದೆ

ಸರ್ಕಾರಿ ಸಿಟಿ ಬಸ್ ಗಳಿಗೆ ಅತ್ಯಾಧುನಿಕ ಸೌಲಭ್ಯ!

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ಸಿಟಿ ಬಸ್ ಗಳಿಗೆಜಪಿಎಸ್ತ್ ಆದಾರಿತ ತಂತ್ರಜ್ಞಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗುತ್ತಿದೆ. ಇದರಿಂದ ಸಿಟಿ ಬಸ್ ಗಳು ಯಾವ ಪ್ರದೇಶದಲ್ಲಿ ಸಂಚರಿಸುತ್ತಿವೆ ಎಂಬುವುದರ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ಈ ವಿವರವನ್ನು ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಸ್ ಪ್ಲೇ ಬೋರ್ಡ್ ಗಳಲ್ಲಿ ಬಿತ್ತರವಾಗುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ತಾವು ಹೋಗುವ ಸ್ಥಳಗಳಿಗೆ ಯಾವಾಗ ಸಿಟಿ ಬಸ್ ಬರಲಿದೆ, ಪ್ರಸ್ತುತ ಆ ಬಸ್ ಯಾವ ಪ್ರದೇಶದಲ್ಲಿ ಇದೆ ಎಂಬುವುದರ ವಿವರ ಲಭ್ಯವಾಗಲಿದೆ.

ಸಿಸಿ ಕ್ಯಾಮರಾ ಅಳವಡಿಕೆ

ಪ್ರಮುಖ ಬಡಾವಣೆ ಹಾಗೂ ರಸ್ತೆಗಳಲ್ಲಿನ ಸಿಟಿ ಬಸ್ ನಿಲ್ದಾಣಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಬಸ್ ನಿಲ್ದಾಣದೊಳಗೆ ಹಾಗೂ ಹೊರಭಾಗದಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಇಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ನೇರವಾಗಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂನಲ್ಲಿ ವೀಕ್ಷಿಸಬಹುದಾಗಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಸಾಕಷ್ಟು ಒತ್ತು ದೊರಕಲಿದೆ ಎಂದು ಸ್ಮಾರ್ಟ್ ಸಿಟಿ ಮೂಲಗಳು ಹೇಳುತ್ತವೆ.

By admin

ನಿಮ್ಮದೊಂದು ಉತ್ತರ

You missed

error: Content is protected !!