ಶಿವಮೊಗ್ಗ, ಮಾ.09:
ಬೊಮ್ಮನಕಟ್ಟೆ ಪಾಲಿಕೆ ಚುನಾವಣೆಯಲ್ಲಿ ಎರಡು ಬಾರೀ ಅತ್ಯಂತ ಕಡಿಮೆ ಅಂತರದಿಂದ ಪರಾಭವ ಗೊಂಡಿದ್ದ ಎಲ್ಲರ ಪ್ರೀತಿಯ ಬೊಮ್ಮನಕಟ್ಟೆ ರಸ್ತೆ, ಮೇದಾರಕೇರಿ ನಿವಾಸಿ ವಿ. ಭಗವಾನ್ ಇಂದು ಮುಂಜಾನೆ ನಿಧನರಾದರು.
ಸುದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲಿದ್ದ ಅವರು ನಿಧನರಾಗಿದ್ದು, ಅವರಿಗೆ 52 ವರ್ಷ ವಯಸ್ಸಾಗಿತ್ತು,

ಕಾಂಗ್ರೇಸ್ ಪಕ್ಷದಲ್ಲಿ ಯುವಮುಖಂಡನಾಗಿ ಸಮಾಜದ ಕೆಳಸ್ತರದ ಜನರ ಜೊತೆ ಅಪಾರ ಪ್ರೀತಿ ಹೊಂದಿದ್ದ ಭಗವಾನ್ ನಂತರ ಬಿಜೆಪಿ ಸೇರಿದ್ದರು. ಆದರೆ, ಎರಡೂ ಪಕ್ಷಗಳು ಅವರಿಗೆ ಪಾಲಿಕೆ ಚುನಾವಣೆಯ ಟಿಕೇಟ್ ನೀಡದೇ ವಂಚಿಸಿದ್ದವು ಎಂಬ ಆರೋಪ ಸಾಮಾನ್ಯವಾಗಿತ್ತು.
ದಲಿತ ಸಂಘಟನೆಯ ಪ್ರಮುಖರಾಗಿ ಹತ್ತಾರು ಜನಪರ ಕಾರ್ಯ ಮಾಡಿದ್ದರು.

ಮನಸ್ವಿನಿಯರಿಗಾಗಿ ಹೋರಾಟ ಮಾಡಿ ನಿವೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಭಗವಾನ್ ಅವರ ಹೆಸರಿನಲ್ಲೇ ಬೊಮ್ಮನಕಟ್ಟೆಯಲ್ಲಿ ರಸ್ತೆಯೊಂದಿದೆ ಎಂದರೆ, ಅವರ ಕಾಳಜಿ ಅರಿವಾಗುತ್ತದೆಯಲ್ಲವೇ?
ಮೃತರು ತಾಯಿ, ಪತ್ನಿ, ಪುತ್ರ, ಸಹೋದರರು ಹಾಗೂ ಸಹೋದರಿಯರು ಸೇರಿದಂತೆ ಅಪಾರ ಯುವ ಪಡೆಯನ್ನು ಅದರಲ್ಲೂ ಬೀದಿಬದಿಯ ವ್ಯಾಪಾರಿಗಳನ್ನು ಬಿಟ್ಟು ಅಗಲಿದ್ದಾರೆ.