ಶಿವಮೊಗ್ಗ ಎಫ್ .ಎಂ. ನಲ್ಲಿ ಎಸ್.ಎಸ್.ಎಲ್. ಸಿ. ಪಾಠ https://tungataranga.com/?p=9265

ಶಿವಮೊಗ್ಗ, ಮಾ.12:
ರಾಜ್ಯ ಮತ್ತು ಕೇಂದ್ರ ಸರ್ಕಾರ ಬಗರ್‌ಹುಕುಂ ಸಾಗುವಳಿದಾರರಿಗೆ ರಕ್ಷಣೆ ಕೊಡಬೇಕು. ನ್ಯಾಯಾಲಯಕ್ಕೆ ಅಲೆದಾಡಿ ಸಬಾರದು. ಈಗ ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬಿಸಬಾರದು ಎಂದು ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.


ಅವರು ಇಂದು ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಬಗರ್‌ಹುಕುಂ ಸಮಸ್ಯೆ ಜೀವಂತವಾಗಿ ರಲು ಇಂದಿನ ಬಿಜೆಪಿ ಸರ್ಕಾ ರವೇ ಕಾರಣ ವಾಗಿದೆ. ಇದು 2006ರ ಸಮಸ್ಯೆಯಲ್ಲ. 2012 ರ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರ ಬಗರ್ ಹುಕುಂ ಸಾಗುವಳಿ ದಾರರನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಅಧಿಕಾರಿಗಳು ಸೊರಬ ತಾಲೂಕು ಒಂದ ರಲ್ಲಿಯೇ ಸುಮಾರು 10ಸಾವಿರಕ್ಕೂ ಹೆಚ್ಚು ಬಗರ್ ಹುಕುಂ ಸಾಗುವಳಿದಾರರಿಗೆ ನೋಟಿಸ್ ನೀಡಿದ್ದಾರೆ. ನೂರಾರು ರೈತರು ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆ ದಾಡುತ್ತಿದ್ದಾರೆ. ಜಾಮೀನು ತೆಗೆದುಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಸಾಗು ವಳಿದಾರರ ಸಮಸ್ಯೆ ಬೆಳೆದು ನಿಂತಿದೆ ಎಂದರು.
ಬಿಜೆಪಿ ಸದಾ ಸುಳ್ಳು ಹೇಳುತ್ತಲೇ ಬಂದಿದೆ. ಸಂಸದ ರಾಘವೇಂದ್ರರಿಗೆ ಈ ಸಮಸ್ಯೆಯ ಬಗ್ಗೆ ಏನು ತಿಳಿದೇ ಇಲ್ಲ. ಸಾವಿ ರಾರು ಜನರಿಗೆ ಕೇಸು ಹಾಕುತ್ತಿದ್ದರೂ ಕೂಡ ಕಣ್ಣು ಮುಚ್ಚಿಕೊಂಡು ಕುಳಿ ತ್ತಿದ್ದಾರೆ. ಸಂಸತ್ತಿನಲ್ಲಿ ಈ ಬಗ್ಗೆಯೂ ಚರ್ಚೆಯೂ ಮಾಡಲಿಲ್ಲ. ಆಗಿದ್ದು ಆಯ್ತು. ಈಗಲಾದರೂ ರಾಜ್ಯಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಬಗರ್ಹುಕುಂ ಸಾಗುವಳಿದಾರರ ರಕ್ಷಣೆಗೆ ನಿಲ್ಲಬೇಕು ಮತ್ತು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದ ಅವರು, ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ಈ ಸಮಸ್ಯೆಯನ್ನು ಬಗೆಹರಿಸು ವಲ್ಲಿ ರಾಜ್ಯ ಸರ್ಕಾರ ಮತ್ತು ಸಂಸದರು ಸಂಪೂ ರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ವಿದ್ಯುತ್ ಇಲ್ಲ: ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ನೀಡುತಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಅದನ್ನು ನಿಲ್ಲಿಸಲಾಗಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ನಿರಂತರವಾಗಿ ರುವುದರಿಂದ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ,


ವಿದ್ಯಾರ್ಥಿಗಳ ನೆರವಿಗೆ ಬನ್ನಿ:
ರಷ್ಯಾ ಮತ್ತು ಉಕ್ರೇನ್ ಯುದ್ದದ ಸಂದರ್ಭದಲ್ಲಿ ಅಲ್ಲಿ ಮೆಡಿಕಲ್ ಓದುತ್ತಿದ್ದ ಸುಮಾರು ೧೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾರತಕ್ಕೆ ಬಂದಿದ್ದಾರೆ. ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅವರ ನೆರವಿಗೆ ಬರಬೇಕು ಎಂದರು.

ಗಳಿಸಿದ್ದರಲ್ಲಿ ಸಮಾಜಕ್ಕೆ ಮರಳಿಸಿದರೆ ‘ಯಶ’ ಸಾಧ್ಯ: ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚ್ಚುತ್ ಗೌಡ https://tungataranga.com/?p=9270


ಮಾ.14 ರಂದು ಪ್ರತಿಭಟನೆ: ನಿರಂತರ ವಿದ್ಯುತ್, ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕೆರೆಗಳಿಗೆ ನೀರು ತುಂಬಿಸುವುದು ಮುಂತಾದ ಸಮಸ್ಯೆಗಳನ್ನು ಇಟ್ಟುಕೊಂಡು ಆನವಟ್ಟಿಯಲ್ಲಿ ಮಾ.೧೪ ರಂದು ಬೆಳಿಗ್ಗೆ 10-30 ಕ್ಕೆ ವಿಠಲ ದೇವಸ್ಥಾನದಿಂದ ಮೆಸ್ಕಾಂ ಕಚೇರಿಯವರೆಗೆ ಬೃಹತ್ ರೈತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖ ಂಡರುಗಳಾದ ಹೆಚ್.ಎಸ್.ಸುಂದರೇಶ್, ಆರ್. ಪ್ರಸನ್ನಕುಮಾರ್, ಆರ್.ಸಿ. ಪಾಟೀಲ್, ಯು.ಶಿವಾನಂದ್, ಶ್ರೀಧರ್ ಹುಲ್ತಿಕೊಪ್ಪ, ಜಿ.ಡಿ.ಮಂಜುನಾಥ್, ಡಾ. ಶ್ರೀನಿವಾಸ ಕರಿಯಣ್ಣ, ವೈ.ಹೆಚ್. ನಾಗ ರಾಜ್ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!