ಶಿವಮೊಗ್ಗ, ಮಾ.13:
ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇರುವ ಇಂದಿರಾ ರಾಷ್ಟ್ರೀಯ ಮುಕ್ತ ವಿವಿ(ಇಗ್ನೋ)ಯ 2022 ರ ಅವಧಿಯ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳು, ಡಿಪ್ಲೊಮಾ, ಸ್ನಾತಕೋತ್ತರ ಪದವಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿವಿಯ ಪ್ರಾದೇಶಿಕ ಸಹಾಯ ನಿರ್ದೇಶಕ ಡಾ. ಎಂ. ಷಣ್ಮುಗಂ ಹೇಳಿದರು.
ಅವರು ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಇಗ್ನೋ ಮುಕ್ತ ವಿವಿಯು ಕಳೆ ಹಲವು ವರ್ಷಗಳಿಂದ ಸಂಸತ್ ಕಾಯ್ದೆಯಂತೆ ರೂಪಿಸ ಲ್ಪಟ್ಟಿದೆ. ಯುಜಿಸಿಯಿಂದ ಮಾನ್ಯತೆ ಪಡೆದ ಮುಕ್ತ ವಿವಿ ಇದಾಗಿದ್ದು, ಸುಮಾರು 3 ದಶ ಲಕ್ಷಕ್ಕೂ ಹೆಚ್ಚು ವಿದ್ಯಾ ರ್ಥಿಗಳು ಇಲ್ಲಿಂದ ಪದವಿ ಪಡೆದಿದ್ದಾರೆ. ಪ್ರಮುಖವಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಮುಕ್ತ ವಿವಿ ಮೂಲಕ ಪದವಿ ಪಡೆಯಲು ಅನುಕೂಲ ವಾಗುವಂತೆ ಈ ಮುಕ್ತ ವಿವಿ 1955 ರಿಂದ ಕೆಲಸ ಮಾಡುತ್ತಿದೆ ಎಂದರು.


ಆಸಕ್ತ ವಿದ್ಯಾರ್ಥಿಗಳು ಮಾ. 15 ರೊಳಗೆ ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕವೇ ಶುಲ್ಕ ಕಟ್ಟಿ ಪ್ರವೇಶ ಪಡೆದುಕೊಳ್ಳಬೇಕಾಗಿದೆ ಎಂದರು.
ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ವಿವಿಧೆಡೆ ಯಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಇಲ್ಲಿನ ಪ್ರಮಾಣ ಪತ್ರಗಳನ್ನು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸದಸ್ಯರು ಗುರುತಿಸುತ್ತಾರೆ. ಮುಕ್ತ ವಿವಿಯಲ್ಲೂ ಕೂಡ ಧ್ಯಯನ ಸಾಮಗ್ರಿಗಳು, ಕಲಿಯುವವರ ಬೆಂಬಲ ಕೇಂದ್ರಗಳು, ಟಿವಿ ಚಾನೆಲ್ ಮೂಲಕ ಪಾಠಗಳನ್ನು ಬೋಧಿಸಲಾಗುತ್ತದೆ. ಪರಿಶಿಷ್ಟ ಪಂಗಡ ಮತ್ತು ಜಾತಿಯ ವರಿಗೆ, ಜೈಲು ಕೈದಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ. ಆಸಕ್ತರು ಇದರ ಪ್ರಯೋಜನ ಪಡೆಯಬೇಕು. ಹೆಚ್ಚಿನ ವಿವರಕ್ಕೆ ಮೊಬೈಲ್ ಸಂಖ್ಯೆ 9141633477 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಎಂ. ವೆಂಕಟೇಶ್, ಸಂಯೋಜನಾಧಿಕಾರಿ ಡಾ. ಎ.ಟಿ. ಪದ್ಮೇಗೌಡ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!