ಶಿವಮೊಗ್ಗ: ಸಭೆ, ಸಮಾರಂಭ ಜಾಹೂ ಕಛೇರಿಯ ತುರ್ತುಕಾರ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅವಧಿಯಲ್ಲಿ ಯಾವಾಗಬೇಕಾದರೂ ಸಾರ್ವಜನಿಕರು ನನ್ನನ್ನು ಬೇಟಿಮಾಡಬಹುದು. ಅದಕ್ಕೆ ಯಾವುದೇ ನಿಬಂಧನೆಗಳಿಲ್ಲ ಎಂದು ಶಿವಮೊಗ್ಗದ ನೂತನ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.
ಅವರು ಇಂದು ಬೆಳಿಗ್ಗೆ ಪ್ರೆಸ್ ಟ್ರಸ್ಟ್ನ ಪತ್ರಿಕಾ ಸಂವಾದದಲ್ಲಿ ಮಾತನಾಡುತ್ತಾ, ನನ್ನ ಕಛೇರಿ ಯಾವಾಗಲೂ ತೆರೆದಿರುತ್ತದೆ. ಯಾವುದೇ ಸಮಸ್ಯೆಗಳಿಗೆ ಭೇಟಿ ಮಾಡಬಹುದು. ಯಾವುದೇ ಕಂಡಿಷನ್ ಇಲ್ಲ. ಕಛೇರಿಯ ಮುಖ್ಯ ಸಭೆಗಳು ಮತ್ತಿತರ ಕಾರ್ಯಕ್ರಮಗಳ ಅವಧಿಯಲ್ಲಿ ಭೇಟಿ ಮಾಡುವುದು ವಿಳಂಬವಾಗಬಹುದಷ್ಟೆ ಎಂದು ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಮುರುಳಿ ಜೋಷಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು.
ಜಿಲ್ಲಾಧಿಕಾರಿಗಳ ಭೇಟಿಗೆ ನಿಗಧಿತ ಸಮಯ ಘೋಷಿಸಿಕೊಂಡಿದ್ದ ಕೆಲ ಜಿಲ್ಲಾಧಿಕಾರಿಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಳ ಹಾಗೂ ಸಹಜ ಧ್ವನಿಯಲ್ಲಿ ಉತ್ತರಿಸಿದ ಡಾ.ಸೆಲ್ವಮಣಿ ಅವರು ಜಿಲ್ಲೆಯಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಹಾಗೂ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ಮಾಧ್ಯಮಗಳ ಮೂಲಕ ವಿನಂತಿಸಿದರು.
ಶಿವಮೊಗ್ಗದಲ್ಲಿ ಶಿಕಾರಿಪುರ ಪುರಸಭಾ ನೌಕರ ಆತ್ಮಹತ್ಯೆ https://tungataranga.com/?p=8332
ಸಂವಾದದಲ್ಲಿ ಟ್ರಸ್ಟ್ನ ಅಧ್ಯಕ್ಷ ಶಿಎನ್.ಮಂಜುನಾಥ್, ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ, ಜಿ.ಪದ್ಮನಾಭ್, ಎಸ್ಕೆ.ಗಜೇಂದ್ರಸ್ವಾಮಿ


