ಶಿವಮೊಗ್ಗ, ಜ.21:
ಜನವರಿ 20ರ ರಾತ್ರಿ ಜಿಲ್ಲಾಡಳಿತದ ವರದಿಯಂತೆ ಸಾವಿರ ಸಮೀಪದ 870 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮೂರನೇ ದಿನವೂ ಅರ್ಧ ಸಾವಿರ ದಾಟಿದ ಕೊರೊನಾ ಮಹಾಮಾರಿ ಇಂದು ಸಾವಿರ ಸನಿಹದಲ್ಲಿದೆ. ಇದು ಇಡೀ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ವರದಿಯಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 1077 ಕ್ಕೆ ಏರಿದೆ. ಅಂದರೆ ಮೂರನೇ ಅಲೆಯಲ್ಲಿದು ಐದನೆಯ ಸಾವು.
ಇಂದು 1899 ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಇದರಲ್ಲಿ 2513 ಜನರಲ್ಲಿ ನೆಗೆಟಿವ್ ಎಂದು ವರದಿಬಂದಿದೆ.
ವಿದ್ಯಾ ಕ್ಷೇತ್ರದ 99ಮಕ್ಕಳು, ಶಿಕ್ಷಕರು ಹಾಗೂ ಇತರರ ಪರೀಕ್ಷೆಯಲ್ಲಿ 228 ಜನರಿಗೆ ಪಾಸಿಟೀವ್ ಬಂದಿದೆ.
ಇಂದು 365 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, 20 ಜನರನ್ನ ಖಾಸಗಿ ಆಸ್ಪತ್ರೆಯಲ್ಲಿ 09 ಜನರನ್ನು ದಾಖಲಿಸಲಾಗಿದೆ. 2653 ಜನರನ್ನ ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ.
ಒಟ್ಟು ಜಿಲ್ಲೆಯಲ್ಲಿ 2805 ಜನರಲ್ಲಿ ಕೊರೋನ ಪಾಸಿಟಿವ್ ಆಕ್ಟಿವ್ ಕೇಸ್ ಗಳಿವೆ ಎಂದು ಬುಲಿಟಿನ್ ತಿಳಿಸಿವೆ.
ತಾಲೂಕವಾರು ಹೀಗಿದೆ
ಶಿವಮೊಗ್ಗ ತಾಲೂಕಿನಲ್ಲಿ 359, ಭದ್ರಾವತಿ 161, ತೀರ್ಥಹಳ್ಳಿಯಲ್ಲಿ 45, ಶಿಕಾರಿಪುರದಲ್ಲಿ 46, ಸಾಗರದಲ್ಲಿ 118, ಹೊಸನಗರದಲ್ಲಿ 99, ಸೊರಬದಲ್ಲಿ 28, ಹೊರ ಜಿಲ್ಲೆಯಲ್ಲಿ 14 ರಲ್ಲಿ ಪಾಸಿಟಿವ್ ಕಂಡುಬಂದಿದೆ.