ಇದು ಪೊಲೀಸ್ ಇಲಾಖೆ ವರದಿ
ಶಿವಮೊಗ್ಗ, ಜ.15:
ಭದ್ರಾವತಿ ತಾ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಹತೊಳಲು ಗ್ರಾಮದ ವಾಸಿಗಳಾದ ಸಂತೋಷ ಹಾಗೂ ಆತನ ಪತ್ನಿ ಆಶಾರವರು ಸಮೀಪದ ಯಡೇಹಳ್ಳಿ ಗ್ರಾಮದ ವಾಸಿಯಾದ
ಶ್ರೀಮತಿ ವೀಣಾ,32 ವರ್ಷ ರವರ ಬಳಿ ಈ ಹಿಂದೆ 8 ಲಕ್ಷ ರೂ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ಸಾಲದ ಹಣವನ್ನು ವಾಪಾಸ್ಸು ಕೊಡಿಯೆಂದು ಕೇಳದಾಗ ಸಂತೋಷ ಹಾಗೂ ಆಶಾರವರು ವೀಣಾಳಿಗೆ ಹಣವನ್ನು ಹಿಂದಿರುಗಿಸದೇ ಆಕೆಯು ಬೇರೆಯವರ ಜೊತೆ ಸಂಬಂಧ ಇಟ್ಟಿಕೊಂಡಿದ್ದಾಳೆಂದು ಅಪಪ್ರಚಾರ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಈ ವಿಚಾರವಾಗಿ ಆಕೆಯು ಮನನೊಂದು ಕಳೆದ 13-01-2022 ರಂದು ಸಂಜೆ ಸಂಕ್ರಾಂತಿ ಹಬ್ಬಕ್ಕೆ ತನ್ನ ತವರು ಮನೆ ಹೊಳಲ್ಕೆರೆಗೆ ಹೋಗುತ್ತೇನೆಂದು ಹೇಳಿ ತನ್ನ 07 ವರ್ಷ ಮತ್ತು 01 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆ ಮನೆಯಿಂದ ಹೊರಟು ಹಂಚಿನ ಸಿದ್ದಾಪುರ ಗ್ರಾಮದ ಬಳಿ ಇರುವ ಭದ್ರಾ ನಾಲೆಗೆ ಹಾರಿ ಮೃತಪಟ್ಟಿದ್ದು ನಂತರ ವೀಣಾಳ ಮೃತ ದೇಹವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯ ಹತ್ತಿರ ಭದ್ರಾ ನಾಲೆಯಲ್ಲಿ ದೊರೆತಿರುತ್ತದೆ ಎಂದು ನಿನ್ನೆ ಮೃತೆಯ ಪತಿ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0012/2022 ಕಲಂ 306 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಪಿ.ಐ. ಹೊಳೆಹೊನ್ನೂರು ಹಾಗೂ ಸಿಬ್ಬಂದಿಗಳ ತಂಡವು ಇಂದು ಸದರಿ ಪ್ರಕರಣದ ಆರೋಪಿಯಾದ ಸಂತೋಷ, 35 ವರ್ಷ, ಅರಹತೋಳಲು ಗ್ರಾಮ ಭದ್ರಾವತಿ ಈತನನ್ನು ದಸ್ತಗಿರಿ ಮಾಡಿರುತ್ತಾರೆ. ವೀಣಾಳ 07 ವರ್ಷದ ಮಗುವಿನ ಮೃತ ದೇಹವು ಚನ್ನಗಿರಿಯ ನಲ್ಲೂರು ಬಳಿಯ ಭದ್ರಾ ಚಾನಲ್ ನಲ್ಲಿ ದೊರೆತಿದ್ದು, ಮತ್ತೊಬ್ಬ ಮಗಳ ಪತ್ತೆ ಕಾರ್ಯ ಮುಂದುವರೆದಿದೆ.