ಶಿವಮೊಗ್ಗ, ಜ.೧೬:
ಶಿವಮೊಗ್ಗದಲ್ಲಿ ಬರುವ ಫೆ.೨೦ರಂದು ಆರಂಭಗೊಳ್ಳಬೇಕಿದ್ದ ಕೋಟೆ ಶ್ರೀಮಾರಿಕಾಂಬ ಜಾತ್ರೆ ಒಂದು ತಿಂಗಳು ಮುಂದೂಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಕಳೆದ ಎರಡು ವರ್ಷದ ಹಿಂದೆ ಕೋಟೆ ಶ್ರೀಮಾರಿಕಾಂಬ ಜಾತ್ರೆ ನಡೆದ ಬೆನ್ನಲ್ಲೆ ಆರಂಭಗೊಂಡಿದ್ದ ಕೊರೊನಾ ಮಹಾಮಾರಿ ಶಿವಮೊಗ್ಗ ಸೇರಿದಂತೆ ಇಡೀ ವಿಶ್ವವನ್ನು ತಲ್ಲಣಗೊಳಿಸಿತ್ತು.
ಪ್ರಸಕ್ತ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಾರಿಕಾಂಬ ಜಾತ್ರೆಯ ದಿನಾಂಕ ನಿಗದಿಯಾಗಿರುವ ಉದ್ದೇಶದಿಂದ ಇಂದು ಶ್ರೀಕೋಟೆ ಮಾರಿಕಾಂಬ ಸೇವಾ ಸಮಿತಿಯ ಪದಾಧಿಕಾರಿಗಳು ಸಚಿವ ಕೆ.ಎಸ್.ಈಶ್ವರಪ್ಪ ಅವರ ಜೊತೆ ಚರ್ಚಿಸಿ ಜಾತ್ರೆಯ ದಿನಾಂಕವನ್ನು ನಿಗಧಿಪಡಿಸುವ ಉದ್ದೇಶದಿಂದ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಕೋಟೆ ಶ್ರೀಮಾರಿಕಾಂಬ ಸಮಿತಿಯ ಪದಾಧಿಕಾರಿಗಳು ಯುಗಾದಿಯೊಳಗೆ ಮಾರಿಜಾತ್ರೆಯನ್ನು ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಸಚಿವರಿಗೆ ವಿನಂತಿಸಿದರು…
ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಈ ಸಂಬಂಧ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕೊರೊನಾ ಮಹಾಮಾರಿ ಹರಡದಿರುವ ಹಾಗೂ ಜನಸಾಮಾನ್ಯರ ಸಾರ್ವಜನಿಕ ಸಮಾರಂಭದ ಕುರಿತು ಚರ್ಚಿಸಿದರು.
ಅಂತಿಮ ನಿರ್ಣಯದಂತೆ ಕೊರೊನಾ ಜಂಜಾಟಗಳ ನಡುವೆ ಒಂದು ತಿಂಗಳ ಕಾಲ ಜಾತ್ರೆ ಮುಂದೂಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.