ಶಿವಮೊಗ್ಗ ಜಿಲ್ಲೆಯನ್ನಷ್ಟೆ ಪರಿಗಣಿಸಿ, ಗಮನಿಸಿ ಹೇಳುವುದಾದರೆ ಕೊರೊನಾ ಮಹಾಮಾರಿಗೆ ಡೊಂಟ್ ಕೇರ್, ಡೊಂಡ್ವರಿ. ಒಂದು ಎರಡಕ್ಕಷ್ಟೆ ಸೋಂಕಿತರನ್ನು ಕಂಡಿದ್ದ ಶಿವಮೊಗ್ಗ ಜಿಲ್ಲೆಗೆ ಈ ಮಹಾ ಮಾರಿಯನ್ನು ಏಕಾಏಕಿ ಹಬ್ಬಿ ಸಿದ್ದು ಯಾರು..? ಶಿವಮೊಗ್ಗ ನಗರ ಸೇರಿ ದಂತೆ ಜಿಲ್ಲೆಯಿಂದ ಓಂ ಶಕ್ತಿ, ಸ್ವಾಮಿ ಅಯ್ಯಪ್ಪ ಪ್ರವಾಸಿಗರು ಅನ್ಯರಾಜ್ಯದಲ್ಲಿ ಪ್ರವಾಸ ಮಾಡಿ ಬಂದವರಿಗೆ ಆರೋಗ್ಯ ಇಲಾಖೆ ಕೇವಲ ಥರ್ಮಲ್ಸ್ಕ್ಯಾನಿಂಗ್ ಹೆಸರಿನಲ್ಲಿ ಪರೀಕ್ಷಿತರಾಗಿ ಮನೆಯೊಳಗೆ ಸೇರಿದ್ದವರಾ? ಅಥವಾ ಫಾರಿನ್ ಟ್ರಿಪ್ ಹೋಗಿ ಬಂದ ಜನರು ಹಬ್ಬಿಸಿದ್ದಾ..?
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ರಾಜ್ಯದಲ್ಲಿ ಹಬ್ಬಿದಂತೆ ಅಂದರೆ ಬೇರೆ ಜಿಲ್ಲೆಗಳ ಹಾಗೂ ಇತರ ರಾಜ್ಯಗಳಲ್ಲಿ ಹಬ್ಬಿದಂತೆ ಹಬ್ಬುವ ಯಾವುದೇ ಅವಕಾಶಗಳಿರಲಿಲ್ಲ. ಕೆಲ ರಾಜಕಾರಣಿಗಳು ನೀಡಿದ ಉಚಿತ ದೈವ ಪ್ರೇರಣೆಯ ಪ್ರವಾಸಗಳು ಹಾಗೂ ಕೆಲ ಜನರ ಮನಸ್ಸಿನಲ್ಲಿರುವ ದೈವ ಪ್ರವಾಸಗಳು ಈ ಮಹಾಮಾರಿ ಹಬ್ಬಲು ಕಾರಣವಾ ಯಿತಾ…? ದಶಕದೊಳಗಿದ್ದ ಸೋಂಕಿತರ ಸಂಖ್ಯೆ ಇಂದು ೩೦೦ರ ಗಡಿ ದಾಟಿದೆ ಎಂದರೆ ಜನ ಭಯಪಡಬೇಕಿತ್ತು.
ಶಿವಮೊಗ್ಗ ಜನ ಎಷ್ಟೇ ಕೊರೊನಾ ಹೆಚ್ಚಾದರೂ ಡೊಂಟ್ಕೇರ್ ನಿಯಮಕ್ಕೆ ಬಂದಿರುವುದು ಯಾವ ಕಾರಣಕ್ಕೆ? ಯಾವ ಉದ್ದೇಶಕ್ಕೆ ಎಂಬುವುದು ಭಗವಂತನಿಗೇ ಗೊತ್ತು. ಕೊರೊನಾ ೨ನೇ ಹಂತದಲ್ಲಿ ಅಷ್ಟೊಂದು ಸಾವು, ನೋವುಗಳು ಸಂಭವಿಸಿದರೂ ಸಹ ೩ನೇ ಅಲೆ ಬರುತ್ತದೆ ಎಂದು ಹೆದರುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆ. ಇಲ್ಲವೇ ಅದು ನಿಕೃಷ್ಟ ವಾಗಿದೆ. ಜನ ಪ್ರತಿನಿಧಿಗಳಿಗೆ ಕೊರೊನಾ ಸೋಂಕು ತಟ್ಟಿದಾಗ ಮಾತ್ರ ಅದೊಂದು ವಿಷಯವಾಗುತ್ತಿದೆ ಅಷ್ಟೆ.!
ಈ ಕೊರೊನಾ ಸೋಂಕು ಹೆಚ್ಚುವಿಕೆ ಹಾಗೂ ಕಳೆದ ೨ನೇ ವಾರಾಂತ್ಯದ ಕರ್ಫ್ಯೂ ನಡುವೆ ಶಿವಮೊಗ್ಗ ತಣ್ಣಗಾಗ ಲಿಲ್ಲ. ಅದೇ ಬಗೆಯಲ್ಲಿ ಬದುಕು ಸಾಗಿಸು ತ್ತಿದ್ದಾರೆ. ಕೊರೊನಾ ಸೋಂಕು ನಿಯಂ ತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಗೊಳಿಸಿರುವ ಎರಡನೇ ವಾರಾಂತ್ಯ ಕರ್ಫ್ಯೂನಲ್ಲಿ ಜಿಲ್ಲೆಯಲ್ಲಿ ಸಂಚಾರ ಮಾಮೂಲಿಯಾಗಿತ್ತು. ಪೊಲೀಸರು ಕೆಲ ಸರ್ಕಲ್ಗಳಲ್ಲಿ ಬ್ಯಾರಿಕೇಡ್ ಹಾಕಿದನ್ನು ಬಿಟ್ಟರೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಶಾಲೆ, ಬಸ್, ಬಟ್ಟೆ, ಮದ್ಯ ಇತರೆ ಕೆಲವನ್ನು ಬಿಟ್ಟರೆ ಎಲ್ಲಾ ಮಾಮೂಲಿ ದುರಂತವೆಂದರೆ ಪೊಲೀ ಸರು ಇಲ್ಲಿಯೂ ಮಾಸ್ಕ್, ಹೆಲ್ಮೆಟ್ ದಂಡ ಹಾಕುತ್ತಿದ್ದರು
ಸರ್ಕಾರ ಸೂಚಿಸಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಜಾರಿಗೆ ತರಲಾಗಿದೆ. ಪೊಲೀಸರು ಸಾಗರ ರಸ್ತೆ, ಎನ್ಟಿ ರಸ್ತೆ, ಬಿ.ಎಚ್.ರಸ್ತೆ, ಗೋಪಿ ವೃತ್ತ, ಮಹಾವೀರ ವೃತ್ತ, ಪೊಲೀಸ್ ಚೌಕಿ, ವಿನೋಬನಗರದ, ಸವಳಂಗ ರಸ್ತೆ, ವಿವಿಧ ಕಡೆಗಳಿಂದ ನಗರಕ್ಕೆ ಬರುವವ ರನ್ನು ತಡೆದು ಪರಿಶೀಲಿಸುವ ಕೆಲಸದಲ್ಲಿ ನಿರತರಾಗಿದ್ದರು. ಅನಗತ್ಯವಾಗಿ ನಗರದ ಕಡೆ ಬಂದವರಿಗೆ ದಂಡ ವಿಧಿಸಿದರು.
ವೈದ್ಯಕೀಯ ಸೇವೆ, ಹಾಲು, ಹಣ್ಣು ಮತ್ತು ತರಕಾರಿ, ದಿನಸಿ, ಚಿಕನ್, ಮಟನ್ ಮಾರಾಟ ಎಂದಿನಂತೆ ನಡೆಯಿತು. ನಗರ ಸಾರಿಗೆ ಬಸ್ಗಳ ಓಡಾಟ ಬಂದ್ ಮಾಡ ಲಾಗತ್ತು. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಇದ್ದರೂ ಸಾರ್ವಜನಿಕರ ಓಡಾಟ ಕಡಿಮೆಯಿತ್ತು. ಆದರೆ ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ಕಲ್ಪಿಸಲಾಗಿತ್ತು
ಕೊರೊನಾ ಪ್ರಕರಣಗಳು ಹೆಚ್ಚಳವಾ ಗುತ್ತಿರುವ ಕಾರಣ ವಾರಾಂತ್ಯದ ಕರ್ಫ್ಯೂ ಜಾರಿಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದುದು ಕಂಡುಬಂತು.
ನೆಹರೂ, ಬಿ.ಎಚ್, ಸಾಗರ, ತೀರ್ಥಹಳ್ಳಿ, ಸವಳಂಗ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು.
ಕುವೆಂಪು ವಿ.ವಿ ವಿದ್ಯಾರ್ಥಿಗಳಿಗೆ ಕೊರೊನಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದಲ್ಲಿ ೨೦ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕು ಬಂದ ವಿದ್ಯಾರ್ಥಿಗಳ ಪೈಕಿ ೧೮ ವಿದ್ಯಾರ್ಥಿಗಳು ಮನೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ತುಮಕೂರು, ಹೊಸಪೇಟೆ ಮೂಲದವರಾಗಿದ್ದು, ವಿಶ್ವವಿದ್ಯಾಲಯದ ಆವರಣದಲ್ಲೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ೧೦ ದಿನ ಇಡೀ ವಿಶ್ವವಿದ್ಯಾಲ ಯವನ್ನೇ ಸೀಲ್ಡೌನ್ ಮಾಡುವ ಬಗ್ಗೆ ಚಿಂತಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ 366 ಮಂದಿಗೆ ಪಾಸಿಟಿವ್
ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದ್ದು, ೩೬೬ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಪೈಕಿ ೧೬೧ ಮಂದಿ ಶಿವಮೊಗ್ಗ ತಾಲ್ಲೂಕಿಗೆ ಸೇರಿದ್ದಾರೆ. ಭದ್ರಾವತಿಯ ೯೮, ತೀರ್ಥಹಳ್ಳಿಯ ೧೬, ಶಿಕಾರಿಪುರದ ೫, ಸಾಗರದ ೪೯, ಹೊಸನಗರದ ೨೩, ಸೊರಬದ ೮ ಹಾಗೂ ಹೊರ ಜಿಲ್ಲೆಯಿಂದ ಬಂದ ೬ ಮಂದಿಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೧೩೩೫ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ೪೯ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨೧ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

