ಶಿವಮೊಗ್ಗ, ಜ.16:
ಶಿವಮೊಗ್ಗ ಜಿಲ್ಲೆಯಲ್ಲಿಂದು ಬಿಡುಗಡೆ ಮಾಡಿದ ಜಿಲ್ಲಾ ಆರೋಗ್ಯ ಹೆಲ್ತ್ ವಿವರದಲ್ಲಿ ಕೊರೊನಾ ಪಾಸೀಟೀವ್ ಸಂಖ್ಯೆ ಮುನ್ನೂರೈವತ್ತೊಂದಷ್ಟೇ…!
ಕಳೆದ ವಾರದ ಹಿಂದೆಯೇ ನಿಮ್ಮ ‘ತುಂಗಾತರಂಗ’ ಜನರ ಅಭಿಪ್ರಾಯಗಳಂತೆ ಕೊರೊನಾ ಹೆಚ್ಚಾಗುವ, ಆರೋಗ್ಯ ಇಲಾಖೆಯ ಥರ್ಮಲ್ ಚೆಕಪ್ ವ್ಯವಹಾರ ಹಾಗೂ ಓಂ ಶಕ್ತಿ ತಾಯಿ ಮಹಿಮೆಯ ಎಲ್ಲಾ ವಿಷಯಗಳನ್ನು ಹಂತಹಂತವಾಗಿ ಸುದ್ದಿ ರೂಪದಲ್ಲಿ ನೀಡಿತ್ತು.
ಈಗ ಈ ಮಹಾಮಾಯೆ ಶಾಲೆಗಳನ್ನ ಬಂದ್ ಮಾಡಿದೆ. ಮತ್ತೆ ನಾಳಿನ ಸೋಮವಾರ ಓಪನ್ ಆಗ್ತಿವೆ. ಮಕ್ಕಳಿಗೆ ಕಾಡಿದೆಯಾ? ವ್ಯವಸ್ಥೆ ಸರಿ ಇದೆಯಾ?
ಇಂದಿನ ವರದಿ ಪ್ರಕಾರ 1089 ಜನ ಪರೀಕ್ಷಿತರು ಸೇರಿ 339 ಪಾಸೀಟೀವ್ ಬಂದಿದೆ.
. ಶಿವಮೊಗ್ಗ ಭದ್ರಾವತಿಗೆ ವಕ್ಕರಿಸಿದ್ದ ಓಂ (?) ಇವತ್ತು ಶಿವಮೊಗ್ಗದಲ್ಲಿ ಮತ್ತೆ ನರ್ತಿಸಿದೆ. ಪಾಪ ಕೆಲವರು ಅದಕೆ ಅಯ್ಯಪ್ಪ ಸ್ವಾಮಿ, ಫಾರಿನ್ ಟ್ರಿಪ್ ಹೆಸರು ಹೇಳಿ ಓಂ ತಾಯಿಯ ಪ್ರಭಾವ ಮರೆ ಮಾಚಿಸುವಂತಹ ಸುದ್ದಿಯನ್ನ ಕಷ್ಟಪಟ್ಟು ಮಾಡುತ್ತಿದ್ದಾರೆ. ಸ್ಲಂ ಏರಿಯಾದ ಹೆಣ್ಣುಮಕ್ಕಳು ಕ್ವಾರಂಟೈನ್ ಮಾಡಲು ಮನೆಯಲ್ಲಿ ಸಪರೇಟು ರೂಮುಗಳಿವೆಯಾ….? ಈ ಪ್ರಶ್ನೆ ಅರ್ಥವಾಗದ ಅಧಿಕಾರಿಗಳಿಗೆ ಬಿಸಿಯೇ ಗೊತ್ತಿಲ್ಲ. ಇಲ್ಲಿನ ಸಂಖ್ಯೆ ಮುನ್ನೂರರ ಗಡಿ ದಾಟಿದೆ.
ಶಿವಮೊಗ್ಗ ತಾಲ್ಲೂಕಿನಲ್ಲಿ 120, ಭದ್ರಾವತಿಯಲ್ಲಿ 105 ಕೇಸುಗಳು ಪಾಸೀಟೀವ್ ಬಂದಿದೆ. ಉಳಿದಂತೆ ತೀರ್ಥಹಳ್ಳಿ 23, ಶಿಕಾರಿಪುರ 04, ಸಾಗರ 48, ಹೊಸನಗರ 24,, ಸೊರಬ 08,, ಇತರೆ ಜಿಲ್ಲೆಯ 07ಜನರಿಗೆ ಪಾಸಿಟೀವ್ ಕಾಣಿಸಿಕೊಂಡಿದೆ.
ಒಟ್ಟಾರೆ ಕೊರೊನಾ ಎಷ್ಟು ಗೊತ್ತಾ ?
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಯೋಜನವಾಗದ ವಾರಾಂತ್ಯ ಕರ್ಫ್ಯೂ, ಎಲ್ಲಾ ಮಾಮೂಲಿ…! ಹೆಚ್ಚುತ್ತಿರುವ ಸೋಂಕು, ಕ್ಯಾರೇ ಎನ್ನದ ಜನತೆ https://tungataranga.com/?p=7968 ಈ ಸುದ್ದಿ ಓದಿ
ಡಿಹೆಚ್ ಓ ಸಾಹೇಬರೇ….? ನೋಡಿದಿರಾ?



