ಶಿವಮೊಗ್ಗ

ಮಾನವ ಹಕ್ಕುಗಳ ಕಮಿಟಿ, ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸಹಕಾರ ನಿಯಮಿತ ಹಾಗೂ ತುಂಗಾ ತರಂಗ ದಿನಪತ್ರಿಕಾ ಬಳಗ ಇಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿ.ಸಿ.ಸೋಮಶೇಖರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿತು.


ಈ ಸಂದರ್ಭದಲ್ಲಿ ಮಾತನಾಡಿದ ಜಿ.ಸಿ.ಸೋಮಶೇಖರ್ ಅವರು, ಕೇವಲ ಸಂಘಟನೆಗೆ ಸಿಮೀತವಾಗದೆ ಮಾನವ ಹಕ್ಕುಗಳ ಕಮಿಟಿ ಹಾಗೂ ಚುಂಚಾದ್ರಿ ಸೊಸೈಟಿ ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೊರೊನಾದ ಸಂಕಷ್ಟದ ಅವಧಿಯಲ್ಲೂ ನಡೆಸುತ್ತಾ ಬಂದಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.


ಚುಂಚಾದ್ರಿ ಸೊಸೈಟಿಯ ಅಧ್ಯಕ್ಷೆ ಶಾರದಾ ಶೇಷಗಿರಿಗೌಡ ಅವರು ಮಾತನಾಡಿ, ಪತ್ರಕರ್ತರು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಸಮಾಜಕ್ಕೆ ಹೇಳುವ ಕಾರ್ಯ ನಡೆಸಬೇಕು. ಈ ನಿಟ್ಟಿನಲ್ಲಿ ಪ್ರಶಸ್ತಿ ಪುರಸ್ಕೃತರಾದ ಸೋಮಶೇಖರ್ ಅವರು ಕಾರ್ಯನಿರ್ವಹಿಸುತ್ತಿರುವುದು ಗೌರವಾನ್ವಿತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ನಿರಂಜನಮೂರ್ತಿ, ಜಿಲ್ಲಾಧ್ಯಕ್ಷ ಎಸ್.ರಮೇಶ್, ಹಿರಿಯ ಪತ್ರಕರ್ತ ಪದ್ಮನಾಭ್, ಚುಂಚಾದ್ರಿ ಸೊಸೈಟಿಯ ಉಪಾಧ್ಯಕ್ಷೆ ಗಿರಿಜಾ ಕುಮಾರ್, ನಿರ್ದೇಶಕರಾದ ನಾಗರತ್ನಮ್ಮ ಶಿವರಾಂ, ಉದಯಕುಮಾರಿ ಹಾಗೂ ಪತ್ರಿಕಾಬಳಗದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!