ಶಿವಮೊಗ್ಗ : ಭಾರತೀಯ ಅಯ್ಯಪ್ಪಸ್ವಾಮಿ ಸೇವಾ ಸಂಘದ (ಬಿಎಎಸ್ಎಸ್) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ರೋಜಾ ಷಣ್ಮುಗಂ ಸ್ವಾಮೀಜಿ ಅವರಿಗೆ ಇಂದು ಅಯ್ಯಪ್ಪಸ್ವಾಮಿ ಭಕ್ತ ವೃಂದ ಹೋಟೆಲ್ ಹರ್ಷದ ಸಭಾಂಗಣದಲ್ಲಿ ಗುರುವಂದನೆ ಸಲ್ಲಿಸಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ರೋಜ ಷಣ್ಮುಗಂ ಸ್ವಾಮೀಜಿ ಶಿವಮೊಗ್ಗದಲ್ಲಿ ಸಂಚಲನವುಂಟು ಮಾಡಿದ್ದಾರೆ. ಅವರು ಸಾಹಿತಿ, ಕವಿಗಳೂ ಹೌದು. ಅಯ್ಯಪ್ಪಸ್ವಾಮಿ ಕುರಿತಂತೆ ಅನೇಕ ಗೀತೆ ರಚಿಸಿದ್ದಾರೆ. ಅವರನ್ನು ರಾಷ್ಟ್ರೀಯ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಭಕ್ತ ವೃಂದ ಮತ್ತಷ್ಟು ಒಳ್ಳೆಯ ಕೆಲಸ ಮಾಡಲಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೋಜಾ ಷಣ್ಮುಗಂ ಸ್ವಾಮೀಜಿ ಅವರು ನಿಮ್ಮೆಲ್ಲರ ಪ್ರೀತಿಯನ್ನು ಕಂಡು ಸಂತೋಷಭರಿತನಾಗಿದ್ದೇನೆ. ದೈವ ಸಂಕಲ್ಪ ಎಲ್ಲರಿಗೂ ಬರಲಿ. ಈ ದೇಶದಲ್ಲಿ ನೊಂದವರಿಗೆಲ್ಲ ನೆಮ್ಮದಿ ಸಿಗಲಿ. ಅಯ್ಯಪ್ಪಸ್ವಾಮಿ ಎಲ್ಲರನ್ನೂ ರಕ್ಷಿಸಲಿ. ಸಮಾಜ ಪರಿವರ್ತನೆಯಾಗಲಿ. ಒಳ್ಳೆಯ ಮನಸು, ಒಳ್ಳೆಯ ಹೃದಯಗಳು ಹೆಚ್ಚಾಗಲಿ ಎಂದರು.

ಕಾರ್ಯಕ್ರಮದಲ್ಲಿ ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಗುರುಸ್ವಾಮಿಗಳಾದ ಮೋಹನ್, ಧನರಾಜ್, ಅಪ್ಪು ಕುಟ್ಟಿ ಹಾಗೂ ಪ್ರಮುಖರಾದ ಶಿವಾನಂದ್, ವೈ.ಹೆಚ್. ನಾಗರಾಜ್, ಹರ್ಷ, ಹೆಚ್.ಪಿ. ಗಿರೀಶ್ ಮೊದಲಾದವರಿದ್ದರು.