ಶಿವಮೊಗ್ಗ: ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 29 ರಂದು ಬೆಳಿಗ್ಗೆ 09 ರಿಂದ ಸಂಜೆ 5 ರವರೆಗೆ ಬೆಕ್ಕಿನ ಕಲ್ಮಠ, ಕೋಟೆರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ.ರಸ್ತೆ, ಒ.ಬಿ.ಎಲ್.ರಸ್ತೆ, ಪೆನ್ಷನ್ಮೊಹಲ್ಲಾ, ಎಲ್.ರಾಮಣ್ಣ ರಸ್ತೆ, ಹಳೇಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಕಪ್ಪನ ಕೇರಿ, ನಾಗಪ್ಪನ ಕೇರಿ, ಬಿ.ಹೆಚ್.ರಸ್ತೆ ಎಡಭಾಗ, ಅಮೀರ್ ಆಹಮದ್ ಸರ್ಕಲ್, ಶಿವಾಜಿರಸ್ತೆ, ತಿರುಪಳಯ್ಯನ ಕೇರಿ, ಸಾರ್ವಕರ್ನಗರ, ಅಶೋಕರಸ್ತೆ, ಕುಚಲಕ್ಕಿ ಕೇರಿ. ಎಂ.ಕೆ.ಕೆ.ರಸ್ತೆ, ಅನವೇರಪ್ಪನ ಕೇರಿ, ಎಲೆ ರೇವಣ್ಣನಕೇರಿ, ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆ, ಗಾಂಧಿ ಬಜಾರ್, ಧರ್ಮರಾಯನ ಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.

ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಹೊಸ ೧೧ ಕೆವಿ. ಮಾರ್ಗದ ಕೆಲಸ ಇರುವುದರಿಂದ ಮಾರ್ಗಮುಕ್ತತೆ ನೀಡುತ್ತಿದ್ದು, ಡಿ.30ರ ಬೆಳಗ್ಗೆ ೧೦.೦೦ ರಿಂದ ಸಂಜೆ ೫.೦೦ ರವರೆಗೆ ಹಳೆಬೊಮ್ಮನಕಟ್ಟೆ, ಮಹಾರಾಣಿ ಶಾಲೆ ಹತ್ತಿರ, ದೇವಂಗ ೨ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗ ೧ ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
