ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ: ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ನವುಲೆಯ ತ್ರಿಮೂರ್ತಿ ನಗರಕ್ಕೆ ಕಾಲಿಟ್ಟರೆ ಕಿತ್ತುಹೋಗಿರುವ ರಸ್ತೆಗಳು, ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಗಳಲ್ಲೆ ಹರಿಯುವ ಬಚ್ಚಲು ಮನೆಯ ಕೊಳಕು ನೀರಿನ ಸುಮಧುರ ವಾಸನೆ ಭಗವಂತನಿಗೇ ಇಷ್ಟವಾಗಬೇಕು…..!
ಇಂತಹದೊಂದು ಪೀಠಿಕೆ ಕೊಡಲು ಕಾರಣ ಇಲ್ಲಿನ ನಾಗರೀಕರು ಸಾಲುಸಾಲಾಗಿ ಪತ್ರಿಕಾ ವರದಿಗಾರನ ಮುಂದೆ ವರದಿ ಒಪ್ಪಿಸಿದ್ದು ಹೀಗಿತ್ತು. ಶಿವಮೊಗ್ಗ ನಗರದ ವಾರ್ಡ್ ನಂ.೦೩ರ ನವುಲೆಯ ಸಮೀಪದ ತ್ರಿಮೂರ್ತಿ ನಗರ ಜನ ಮೇಲಿನ ಮೂಲಭೂತ ಸೌಕರ್ಯ ಗಳಿಂದ ಇಲ್ಲಿನ ನಾಗರೀಕರು ತೀವ್ರ ಸಂಕಷ್ಟಗ ಳನ್ನು ಎದುರಿಸುವಂತಾಗಿದೆ ಎಂದರೆ ತಪ್ಪಾಗಲಾ ರದು. ಇಲ್ಲಿನ ಎರಡನೇ ತಿರುವಿನಲ್ಲಿ ಕಂಡರೂ ಕಾನದಂತಹ ಒಂದೇ ಒಂದು ಬೀದಿ ದೀಪ… ಅದೃಷ್ಟವೆಂದರೆ ಇಲ್ಲಿ ೨ ದಿನಕ್ಕೊಮ್ಮೆ ಹನಿ ನೀರಾವರಿಯಂತೆ ನೀರು ಬಿಡುತ್ತಾರೆ. ಅದು ಬಾಯಿ ಹಸಿಮಾಡಿಸಿಕೊಳ್ಳಲು ಸಾಕೆನಿಸುತ್ತೆ ಎಂದು ನೊಂದು ನಾಗರೀಕರು ಅಹವಾಲು ಹೇಳಿಕೊಳ್ಳುತ್ತಾರೆ.
ಈ ವಾರ್ಡ್‌ನ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಅವರು ಪಾಲಿಕೆ ಸದಸ್ಯರಾಗಿ ೩ ವರ್ಷ ಕಳೆಯುತ್ತಾ ಬಂದರೂ ಸಹ ವಾರ್ಡ್‌ನ ಈ ಭಾಗದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ ಹಾಗೂ ಹಣವಿದ್ದವರ ಮನೆಗಳ ಬಾಗಿಲಿಗೆ ಮಾತ್ರ ಅವರ ಕಾಮಗಾರಿ ವೈಭವ ವಿಜೃಂಭಿಸುತ್ತದೆ. ಸ್ಥಾಯಿ ಸಮಿತಿ ಅಧ್ಯಕ್ಷರಾದ ದೀರರಾಜ್ ಅವರು ಕಷ್ಟ, ನಷ್ಟ, ಬಡತನ ಎಲ್ಲವನ್ನೂ ಕಣ್ಣಾರೆ ಕಂಡು ಬೆಳೆದಿದ್ದರೂ ಇಲ್ಲೇಕೆ ಇಬ್ಬಗೆಯ ನೀತಿ ಎಂದು ಪ್ರಶ್ನಿಸುತ್ತಾರೆ.
ಯುಜಿಡಿ ಕಳಪೆ ಕಾಮಗಾರಿ:
ಯುಜಿಡಿ ಕಾಮಗಾರಿ ನಡೆಸುವ ನೆಪದಲ್ಲಿ ಇಲ್ಲಿನ ರಸ್ತೆಗಳನ್ನು ಅಗೆದು ಹಾಳು ಮಾಡಿರುವು ದಲ್ಲದೇ ಕಾಮಗಾರಿ ಕಳಪೆಯಿಂದ ಕೂಡಿರು ವುದು ಬೆಳಕಿಗೆ ಬಂದಿದ್ದು, ಕೊಳಕು ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಾಣ ಬಹುದು.
ಸೊಳ್ಳೆಗಳ ಕಾಟ:
ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟ್ಟೆಗಳು ಹಾಗೂ ಜನರೇ ಮಾಡಿಕೊಂಡಿರುವ ಕಾಲುವೆಗಳಲ್ಲಿ ನಿಂತರುವ ನೀರಿನಿಂದ ಸೊಳ್ಳೆಗಳ ಕಾರ್ಖಾನೆ ತಯಾರಾಗುತ್ತಿದ್ದು, ಜನರು ಸೊಳ್ಳೆಗಳ ಕಾಟದಿಂದ ವಿವಿಧ ಕಾಯಿಲೆಗಳಿಗೆ ಒಳಗಾಗು ತ್ತಿರುವುದು ಕಾಣಬಹುದು.
ಎರಡು ದಿನಕ್ಕೊಮೆ ಕಾಟಚರದ ನೀರು:
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಎಲ್ಲಾ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆಗಳನ್ನು ಕಾಣಬಹುದು. ಆದರೆ ಇಲ್ಲಿ ೨ ದಿನಕ್ಕೊಮೆ ನೀರು ಬಿಡುತ್ತಿರುವುದರಿಂದ ಕುಡಿಯಲು, ದಿನನಿತ್ಯಕ್ಕೆ ಬಳಸಲು ನೀರಿಲ್ಲದೇ ತೀವ್ರ ಸಂಕಷ್ಟ ಗಳಿಗೆ ಒಳಗಾಗುತ್ತಿದ್ದೇವೆ ಎಂದು ನಾಗರೀಕರು ಅಳಲು ತೋಡಿಕೊಂಡಿದ್ದಾರೆ.
ರಸ್ತೆಗಳಿಲ್ಲದೇ ವಾಹನ ಸವಾರರ ಪರದಾಟ
ಸರಿಯಾದ ರಸ್ತೆಗಳಿಲ್ಲದೇ ಈ ವಾರ್ಡ್‌ಗಳಲ್ಲಿ ದಿನ ನಿತ್ಯದ ಕೆಲಸಗಳಿಗೆ ಓಡಾಡುವ ಸಾರ್ವಜನಿಕರು ಭಯದಿಂದ ಓಡಾಡುತ್ತಿದ್ದಾರೆ. ಸ್ವಲ್ಪ ಯಾಮರಿದರೆ ವಾಹನದಿಂದ ಬಿದ್ದು, ಕೈಕಾಲು ಮುರಿದುಕೊಂಡು ಸೀದಾ ಚಾನೆಲ್‌ಗೆ ಹೋಗಬಹುದನ್ನು ಗಮನಿಸಬಹುದು.