-ಶಿವಮೊಗ್ಗ,ಅ.೨೭:  ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯವರು ಬೈಲ ಉಲ್ಲಂಘನೆಯ ಜೊತೆಗೆ ಹಣಕಾಸು ದುರ್ಬಳಕ್ಕೆ ಮಾಡಿಕೊಂಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆಡಳಿತ ಮಂಡಳಿಯನ್ನು ಸೂಪರ್ ಸಿಡ್ ಮಾಡಬೇಕು ಎಂಬ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಂಘದ ಉಪಾಧ್ಯಕ್ಷ ಎನ್.ಮಂಜುನಾಥ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಆರ್.ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಮತ್ತು ಅವರ ಹಿಂಬಾಲಕ ನಿರ್ದೇಶಕರುಗಳು ಸೇರಿಕೊಂಡು ಜಿಲ್ಲಾ ಉಪ್ಪಾರ ಸಂಘವನ್ನೇ ದುರುಪ ಯೋಗ ಪಡಿಸಿಕೊಂಡಿದ್ದರು. ಕಳೆದ ೨೧ವರ್ಷದಿಂದ ಸರ್ವ ಸದಸ್ಯರ ಸಭೆ ನಡೆಸಲಿಲ್ಲ. ಲೆಕ್ಕ ಪತ್ರ ಮಂಡಿಸಿ ಅನುಮೋಧನೆ ಪಡೆಯಲಿಲ್ಲ. ಸಂಘದ ನವೀಕರಣೆ ಮಾಡಿಲ್ಲ. ಸದಸ್ಯರ ಶುಲ್ಕವನ್ನು ಬಾಂಕಿಗೆ ತುಂಬಿಲ್ಲ. ಆಡಳಿತಮಂಡಳಿ ಸಭೆಯಲ್ಲಿ ಅನುಮೋಧನೆ ಪಡೆಯದೇ ಕಾಮಗಾರಿ ನಡೆಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.


ಈ ಎಲ್ಲಾ ವಿಷಯಗಳನ್ನು ಇಟ್ಟುಕೊಂಡು ಉಪ್ಪಾರ ಸಂಘದ ಉಪಾಧ್ಯಕ್ಷ ಮತ್ತು ಸಂಘದ ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರಿಗೆ ತನಿಖೆ ನಡೆಸುವಂತೆ ದುರುಸಲ್ಲಿಸಿದ್ದೇವು. ಈ ದೂರಿನ ಆದಾರದಲ್ಲಿ ಸಂಘಗಳ ನೊಂದಾಣಾಧಿಕಾರಿಗಳು ಸಂಘಕ್ಕೆ ದಾಖಲೆಗಳು ಮತ್ತು ವಿವರಗಳನ್ನು ಕೇಳಿ ನಮ್ಮ ದೂರು ಅರ್ಜಿಯನ್ನು ಮಾನ್ಯ ಮಾಡಿ ದ್ದಾರೆ. ನಮ್ಮೇಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಲಾ ಗುವುದು. ೩೦ದಿನದ ಒಳಗೆ ವಿಚಾರಣಾ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಯ್ಯದ್ ಜುನೇಕ್ ಪಾಷಾ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಇದು ನಮಗೆ ಸಿಕ್ಕ ಜಯವಾಗಿದೆ ಎಂದರು.
ತುಂಬಾ ಅವಸರದಲ್ಲಿ ಸಮುದಾಯಭವನ ಉದ್ಘಾಟನೆ ಮಾಡಿದರು. ಯಾವ ಮೂಲಭೂತ ಸೌಲಭ್ಯಗಳು ಇರಲಿಲ್ಲ. ಶೌಚಾಲಯ, ಅಡಿಗೆಮನೆ ಕೂಡ ಇರಲಿಲ್ಲ. ಅಲ್ಲದೇ ಸುಮಾರು ೮೦ಲಕ್ಷ ಖರ್ಚು ಮಾಡಿದ್ದೇವೆ ಎಂದು ಅವರೇ ಹೇಳುತ್ತಾರೆ. ಅಷ್ಟೊಂದು ಹಣ ಅದಕ್ಕೆ ಖರ್ಚಾಗಿಲ್ಲ. ಅಲ್ಲು ಕೂಡ ಬೋಗಸು ಬಿಲ್ಲುಗಳನ್ನು ಸೃಷ್ಠಿಸಿದ್ದಾರೆ.  ಈ ಬಗ್ಗೆಯೂ ಕೂಡ ತನಿಖೆ ನಡೆಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.


ಸಂಘದ ಅಧ್ಯಕ್ಷ ಸತ್ಯನಾರಾಯಣ ಅವರು ಪ್ರಸ್‌ಟ್ರಸ್ಟ್ ವಿಚಾರವನ್ನು ತಂದಿದ್ದು, ಉಪ್ಪಾರ ಸಮಾ ಜಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಆದ್ದರಿಂದ ಅವರ ವಿರುದ್ಧ ೧೦ ಲಕ್ಷ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ಹುಡಲಾಗುವುದು ಮತ್ತು  ಉಪ್ಪಾರ ಸಂಘದಲ್ಲಿ ನಡೆದ ಅವ್ಯವಹಾರ ಕುರಿತು ಸತ್ಯನಾರಾಯಣ ಹಾಗೂ ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಪ್ರಭಾರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಉಪ್ಪಾರ ಸಮಾಜದಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಕೆಲವೇ ಕೆಲವರು ಸೇರಿಕೊಂಡು ಲೆಕ್ಕಪತ್ರ ಕೇಳಿದವರನ್ನು ಬೆದರಿಸುತ್ತಿದ್ದಾರೆ. ಸಂಘದ ಚಟುವಟಿಕೆ ಸರಿಯಾಗಿ ನಡೆಯುತ್ತಿಲ್ಲ. ೩೫ರಿಂದ ೪೦ ಸಾವಿರ ದಷ್ಟು ಜನಸಂಖ್ಯೆ ಇದ್ದರೂ ಕೂಡ ಸಮಾಜದ ವ್ಯಕ್ತಿಗಳ ಮಾತಿಗೆ ಬೆಲೆ ಕೊಡದೆ ಉತ್ಸವ ಮೂರ್ತಿಯಂತೆ ಅಧ್ಯಕ್ಷರನ್ನು ಇಟ್ಟುಕೊಂಡು ಅವ್ಯವಹಾರ ಮಾಡಿಕೊಂಡು ಉಪ್ಪಾರ ಸಮಾಜವನ್ನೇ ನಾಶ ಮಾಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರುವುದಿಲ್ಲ. ಅಲ್ಲದೆ ನಿಯಮಬಾಹಿರವಾಗಿ ಮಾಜಿ ಅಧ್ಯಕ್ಷ ಎಸ್.ಟಿ.ಹಾಲಪ್ಪ ಮತ್ತು ಸತ್ಯನಾರಾಯಣ ಸೇರಿಕೊಂಡು ತಮ್ಮ ಸಂಬಂಧಿಕರನ್ನೇ ಸದಸ್ಯರನ್ನಾಗಿ ಮಾಡಲು ಹೊರಟಿದ್ದಾರೆ. ಉಪ್ಪಾರ ಸಮಾಜದವರು ಯಾರು ಹೊಸದಾಗಿ ಸದಸ್ಯತ್ವ ಪಡೆಯಬಾರದು ಎಂದು ಮನವಿ ಮಾಡಿದರು.
ಪ್ರಮುಖರಾದ ಕೃಷ್ಣಪ್ಪ ಭದ್ರಾವತಿ, ಓಂಕಾರಮೂರ್ತಿ, ನಾಗರಾಜ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!