ರಾಜ್ಯ ವನ್ನೀ ಕುಲ (ವೈಹ್ನಿ) ಕ್ಷತ್ರಿಯ ಮಹಾಸಭಾ ರಾಜ್ಯದಲ್ಲಿನ ಸಮುದಾಯದ ಸದಸ್ಯರಿಗೆ ಕರೆ ನೀಡಿದ್ದು, ಸಂಘಟನೆಗಾಗಿ ಇತರೆ ಸಂಘದವರು ಎಂದುಕೊಂಡು ಹಣ ವಸೂಲಿ ಮಾಡುತ್ತಿರುವುದನ್ನು ತಡೆಗಟ್ಟಲು ವಿನಂತಿಸಿದ್ದಾರೆ.
ವನ್ನಿಯಾರ್, ವನ್ನಿಗೌಂಡರ್, ತಮಿಳು ಗೌಂಡರ್, ಖಂಡರ್, ರೆಡ್ಡಿ, ನಾಯಕರ್, ಪಡಯಾಚಿ, ಪಲ್ಲಿ ಜಾತಿಯ ಹೆಸರಿನಲ್ಲಿರುವ ವನ್ನಿ ಕುಲ ಕ್ಷತ್ರೀಯ ಸಮಾಜದವರು ರುದ್ರ ಮಹಾರಾಜರ ವಂಶಸ್ಥರಾಗಿದ್ದು, ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದಾರೆ. ಕೃಷಿ ನಂಬಿಕೊಂಡು ಬಂದಿರುವ ಈ ಸಮುದಾಯದ ಸಂಘಟನೆಗೆ ಹಾಗೂ ಸಮುದಾಯವನ್ನು ಸಮಾಜಮುಖಿಯನ್ನಾಗಿ ಮಾಡಲು ರಾಜ್ಯದ ೧೬ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಹಾಸಭಾ ನಿರ್ಮಾಣ ಮಾಡಲಾಗಿದೆ ಎಂದು ಸಭಾದ ಪ್ರಮುಖರು ತಿಳಿಸಿದ್ದಾರೆ


ಸಮುದಾಯವು ಶಿವಮೊಗ್ಗ ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ೩ಎ ಪ್ರಮಾಣ ಪತ್ರ ಪಡೆಯುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ ೨ಎ ಪಡೆಯುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ನಂದಕುಮಾರ್ ಗೌಂಡರ್ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಚರ್ಚೆಯಾಗಿಸುವ ಮೂಲಕ ನ್ಯಾಯ ಕೇಳಿರುತ್ತೇವೆ. ಇದಕ್ಕೆ ಪೂರಕವಾಗಿ ಸುಮಾರು ೭೦೦ಕ್ಕೂ ಹೆಚ್ಚು ದಾಖಲೆಗಳನ್ನು ಮಹಾಸಭಾ ನೀಡಿದೆ.
ಸಮಾಜದ ಜನಗಣತಿಯನ್ನು ನಾವೇ ಮಾಡುತ್ತಿದ್ದು, ಸಮಾಜದ ನೊಂದವರಿಗೆ ಸ್ಪಂದಿಸುತ್ತಿದ್ದೇವೆ. ಇದರ ನಡುವೆ ನಮ್ಮ ಸಮುದಾಯದ ಹೆಸರು ಹೇಳಿಕೊಂಡು ಇತರೆ ಸಂಘದವರು ಆರ್ಥಿಕವಾಗಿ ಹಿಂದುಳಿದ ನಮ್ಮ ಸಮಾಜದವರಿಂದ ೨೦೦ರೂ ಹಣ ಹಾಗೂ ಆಧಾರ್ ಕಾರ್ಡ್ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇಂತಹ ಹಣ ಪಡೆಯುವ ಕ್ರಮವನ್ನು ನಾವು ಖಂಡಿಸಿದ್ದೇವೆ. ರಾಜ್ಯಾದ್ಯಂತ ಯಾರಿಂದಲೂ ನಾವು ಯಾವುದೇ ಹಣ ಪಡೆದಿರುವುದಿಲ್ಲ. ನಾವೇ ಸ್ವಂತ ಖರ್ಚಿನಿಂದ ಸಮಾಜದ ಏಳಿಗೆಗೆ ಮಾಡುತ್ತಿದ್ದೇವೆ. ಇಂತಹ ಹಣ ವಸೂಲಿ ನಡೆಸುವವರಿಗೆ ಯಾವುದೇ ಕಾರಣಕ್ಕೂ ಹಣ ನೀಡಬೇಡಿ ಎಂದು ಸಭಾದ ರಾಜ್ಯಾಧ್ಯಕ್ಷ ಕೆ.ನಂದಕುಮಾರ್ ಗೌಂಡರ್, ಗೌರವಾಧ್ಯಕ್ಷರಾದ ಮೋಕ್ಷಾನಂದ, ವಿಜಯಕುಮಾರ್, ಉಪಾಧ್ಯಕ್ಷ ಚಂದ್ರು, ಮಹಾ ಪ್ರಧಾನ ಕಾರ್ಯದರ್ಶಿ ಜಿ.ವಿ.ಗಣೇಶಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಪೆರುಮಾಳ್, ರಮೇಶ್, ಖಜಾಂಚಿ ಮುರುಗೇಶ್, ಕಾರ್ಯದರ್ಶಿ ಮುರುಳಿಕುಮಾರ್, ನಿರ್ದೇಶಕರುಗಳಾದ ಮಾಣಿಕ್ಯಂ, ಮುರುಗ, ಅನಿಲ್, ಶೇಖರ್, ಸುಬ್ರಾಯ್, ಸುಬ್ರಮಣಿ ಗೌಂಡರ್ ಹಾಗೂ ಇತರರು ವಿನಂತಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!