ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲು ಅರ್ಜಿ ಆಹ್ವಾನ

2021-22ನೇ ಸಾಲಿನ ಹಿಂದುಳಿದ ವರ್ಷ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ, ಪ್ರವರ್ಗ-1 ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 21 ಕೊನೆಯ ದಿನಾಂಕವಾಗಿದೆ.
ಅರ್ಜಿಯೊಂದಿಗೆ ಶಾಲೆಯಲ್ಲಿ ಪ್ರವೇಶ ಪಡೆದಿರುವ ಸ್ಯಾಟ್ಸ್-ಐಡಿ, ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಪೋಷಕರ ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ, ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆದಿದ್ದಲ್ಲಿ ಹಿಂದಿನ ಸಾಲಿನ ಅರ್ಜಿ ಸಂಖ್ಯೆ, ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್ ನೋಂದಣಿ ಮಾಡಿಸಿದ ಈ.ಐ.ಡಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ ಸಂಖ್ಯೆ, ಬ್ಯಾಂಕಿನ ವಿಳಾಸ ಹಾಗೂ ಪೋಷಕರ ಆಧಾರ್ ನಂಬರ್ ಗೆ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ ಹಾಗೂ ಭೌತಿಕ ಅನುಮತಿ ಪತ್ರವನ್ನು ಸಲ್ಲಿಸಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯಮಿತಿ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿ ವೇತನಕ್ಕೆ ವಾರ್ಷಿಕ 2.50 ಲಕ್ಷ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ 1 ಲಕ್ಷ (ಪ್ರವರ್ಗ-1ಎ) ಹಾಗೂ 44,500ರೂ. (ಪ್ರವರ್ಗ-2ಎ, 3ಎ, 3ಬಿ, ಇತರೆ ಹಿಂದುಳಿದ ವರ್ಗಗಳಿಗೆ) ಮೀರಿರಬಾರದು. ಒಂದನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು www.ssp.karnataka.gov.in/8080/2122 ವೆಬ್‍ಸೈಟ್ ವಿಳಾಸದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ www.backwardclasses.kar.nic.in ನ್ನು ಸಂಪರ್ಕಿಸಬಹುದು ಎಂದು ಭದ್ರಾವತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಅರ್ಜಿ ಅವಧಿ ವಿಸ್ತರಣೆ

   ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದಿ ನಿಗಮದ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ 2021-22 ನೇ ಸಾಲಿನ ಸಫಾಯಿ ಕರ್ಮಚಾರಿ/ಪೌರ ಕಾರ್ಮಿಕರು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಿಂದ ಅರ್ಜಿ ಆಹ್ವಾನಿಸಿ ಸೆ.25 ಕಡೆಯ ದಿನವೆಂದು ನಿಗದಿಪಡಿಸಲಾಗಿದ್ದು, ಈಗ ಈ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 15 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ನಿಗಮದ ವೆಬ್‍ಸೈಟ್ www.ksskdc.kar.nic.in  ನಲ್ಲಿ ಅರ್ಜಿ ಡೌನ್‍ಲೋಡ್ ಮಾಡಿಕೊಂಡು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ನೋಂದಾಯಿತ ಸಂಘ ಸಂಸ್ಥೆಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಲು ಬಯಸುವ ಸಂಘ ಸಂಸ್ಥೆಗಳಿಗೆ ಸಕ್ಕಿಂಗ್ & ಜಟ್ಟಿಂಗ್ ಯಂತ್ರಗಳನ್ನು ಖರೀದಿಸಲು ನಿಗಮದಿಂದ ಶೇ.75 ರಷ್ಟು ಸಹಾಯಧನ ಬಾಕಿ ಶೇ.25 ರಷ್ಟು ಮೊತ್ತವನ್ನು ಸಂಘ ಸಂಸ್ಥೆಗಳು ಸ್ವಂತ ನಿಧಿ ಅಥವಾ ಬ್ಯಾಂಕ್ ಸಾಲದ ಮೂಲಕ ಸಾಲ ಪಡೆಯಬಹುದು.
ಸಫಾಯಿ ಕರ್ಮಚಾರಿ/ಪೌರ ಕಾರ್ಮಿಕರು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಮಕ್ಕಳಿಗೆ ಆನ್‍ಲೈನ್ ಪಾಠ/ವಿದ್ಯಾಭ್ಯಾಸ ಸೌಲಭ್ಯ ಪಡೆಯುತ್ತಿರುವ 9, 10 ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಯೋಜನೆ ಹಮ್ಮಿಕೊಳ್ಳಲಾಗಿದೆ.
  ಸಫಾಯಿ ಕರ್ಮಚಾರಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಪೌರ ಕಾರ್ಮಿಕ ಮಹಿಳಾ ಫಲಾಪೇಕ್ಷಿಗಳಿಗೆ ಮಾತ್ರ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವ ಸಲುವಾಗಿ ದ್ವಿಚಕ್ರ ವಾಹನ ಸೌಲಭ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ. ದ್ವಿಚಕ್ರ ವಾಹನ ಖರೀದಿಸಲು ನಿಗಮದಿಂದ ಶೇ.90 ರಷ್ಟು ಸಹಾಯಧನ ಹಾಗೂ ಶೇ.10 ರಷ್ಟು ಮೊತ್ತವನ್ನು ಫಲಾಪೇಕ್ಷಿಗಳು ಭರಿಸಬೇಕಾಗುತ್ತದೆ.
ಫಲಾಪೇಕ್ಷಿಗಳು ಆಫ್‍ಲೈನ್ ಮೂಲಕ ಸಹ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಗಾಂಧಿನಗರ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-224349 ನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೊಸನಗರ : ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಹೊಸನಗರ ತಾಲ್ಲೂಕು ಕಾರಕ್ಕಿ ಗ್ರಾಮದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಪ್ರಕಟಣೆ ಹೊರಡಿಸಲಾಗಿದ್ದು, ಆಸಕ್ತರು ಅಕ್ಟೋಬರ್ 18 ರಿಂದ ನವೆಂಬರ್ 17 ರೊಳಗೆ ತಹಶೀಲ್ದಾರರ ಕಚೇರಿ ಹೊಸನಗರ ತಾಲ್ಲೂಕು ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರೀಕ ಸರಬರಾಜ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಶಿವಮೊಗ್ಗ ಇಲ್ಲಿ ಅರ್ಜಿ ಸಲ್ಲಿಸಬಹುದು.


ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ತಹಶೀಲ್ದಾರರು, ಹೊಸನಗರ ತಾಲ್ಲೂಕು ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಶಿವಮಗೊಗ ಇವರ ಕಾರ್ಯಾಲಯದಿಂದ ಪಡೆಯಬಹುದಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಶಿಕಾರಿಪುರ : ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಶಿಕಾರಿಪುರ ತಾಲ್ಲೂಕು ಮುದ್ದನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಪ್ರಕಟಣೆ ಹೊರಡಿಸಲಾಗಿದ್ದು, ಆಸಕ್ತರು ಅಕ್ಟೋಬರ್ 25 ರಿಂದ ನವೆಂಬರ್ 24 ರೊಳಗೆ ತಹಶೀಲ್ದಾರರ ಕಚೇರಿ ಶಿಕಾರಿಪುರ ತಾಲ್ಲೂಕು ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರೀಕ ಸರಬರಾಜ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಶಿವಮೊಗ್ಗ ಇಲ್ಲಿ ಅರ್ಜಿ ಸಲ್ಲಿಸಬಹುದು.


ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ತಹಶೀಲ್ದಾರರು, ಶಿಕಾರಿಪುರ ತಾಲ್ಲೂಕು ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಶಿವಮಗೊಗ ಇವರ ಕಾರ್ಯಾಲಯದಿಂದ ಪಡೆಯಬಹುದಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಭೂ ಒಡೆತನ ಯೋಜನೆಯಡಿ ಅರ್ಜಿ ಆಹ್ವಾನ

2020-21 ನೇ ಸಾಲಿಗೆ ಭೂ ಒಡೆತನ ಯೋಜನೆಯಡಿ 03 ನಿಗಮಗಳಾದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮಗಳ ವತಿಯಿಂದ ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯವರಲ್ಲದ ಇತರೇ ಜನಾಂಗದ ಜಮೀನು ಮಾರಾಟ ಮಾಡುವ ಭೂ ಮಾಲೀಕರಿಂದ ಜಮೀನನ್ನು ಖರೀದಿಸಿ ಅರ್ಹ ಪರಿಶಿಷ್ಟ ಜಾತಿ ಮಹಿಳಾ ಫಲಾಪೇಕ್ಷಿಗಳಿಗೆ ನಿಗಮದ ವತಿಯಿಂದ ಜಮೀನು ಖರೀದಿಸಿ ವಿತರಿಸಲಾಗುವುದು. ಅದರಂತೆ ಜಮೀನು ಮಾರಾಟ ಮಾಡಲು ಇಚ್ಚಿಸಿದ ಭೂ ಮಾಲೀಕರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ತಾಲ್ಲೂಕು ಅಥವಾ ಜಿಲ್ಲಾ ಕಚೇರಿ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸಬಹುದು.
ಈ ಯೋಜನೆಯ ಫಲಾಪೇಕ್ಷಿಯು ಪರಿಶಿಷ್ಟ ಜಾತಿಗೆ ಸೇರಿದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು. ಮತ್ತು ಆಕೆಯ ಪತಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೃಷಿ ಜಮೀನು ಇರಬಾರದು. ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪ.ಜಾ ಮತ್ತು ಪ.ಪಂ ಜನಾಂಗಕ್ಕೆ ಸೇರಿರಬಾರದು.


ಘಟಕ ವೆಚ್ಚ ರೂ.15 ಲಕ್ಷಗಳಿದ್ದು ಇದರಲ್ಲಿ ಶೇ.50 ಭಾಗ ಸಹಾಯಧನ ಮತ್ತು ಶೇ.50 ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು. ಘಟಕ ವೆಚ್ಚದ ಮಿತಿಯಲ್ಲಿ 2 ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಅಥವಾ ಬಾಗಾಯ್ತು ಅರ್ಧ ಎಕರೆಗೆ(20 ಗುಂಟೆ) ಕಡಿಮೆಯಿಲ್ಲದಂತೆ ಒದಗಿಸಲಾಗುವುದು. ಫಲಾನುಭವಿಯು ಸಾಲದ ಹಣವನ್ನು 20 ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಇದಕ್ಕೆ ಬಡ್ಡಿದರ ಶೇ.4 ವಿಧಿಸಲಾಗುತ್ತದೆ.
ಈ ಯೋಜನೆ ಸೌಲಭ್ಯ ಪಡೆಯಲು ಆಸಕ್ತರು ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ, 6ನೇ ತಿರುವು ‘ಎ’ ಬ್ಲಾಕ್ ಶಿವಮೊಗ್ಗ ಇಲ್ಲಿ ಪಡೆಯಬಹುದು. ಹಾಗೂ ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಯಲ್ಲಿ ನಿಗಮದ ತಾಲ್ಲೂಕು ಅಭಿವೃದ್ದಿ ಅಧಿಕಾರಿಗಳು ಹಾಗೂ ಜಿಲ್ಲಾ ಕಚೇರಿ ದೂ.ಸಂ: 08182-224349 ನ್ನು ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೇಸಿಕ್ ಹೊಲಿಗೆ ತರಬೇತಿ ನೀಡುವ ಸಂಸ್ಥೆಗಳಿಂದ ಅರ್ಜಿ ಆಹ್ವಾನ

    

2021-22 ನೇ ಸಾಲಿನ ಜಿಲ್ಲಾ ವಲಯ ಕಾರ್ಯಕ್ರಮದಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ, ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಚೇರಿಯಿಂದ ಜಿಲ್ಲೆಯ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ 150 ಫಲಾನುಭವಿಗಳಿಗೆ ಬೇಸಿಕ್ ಹೊಲಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಸಂಘ ಸಂಸ್ಥೆಗಳು ತರಬೇತಿ ನೀಡಲು ಷರತ್ತಿಗೊಳಪಟ್ಟು ಅರ್ಜಿಯನ್ನು ಸಲ್ಲಿಸಬಹುದು.

ತರಬೇತಿಯನ್ನು 2021 ರ ನವೆಂಬರ್ ಮಾಹೆಯಿಂದ 2022 ರ ಜನವರಿ ಮಾಹೆವರೆಗೆ ನೀಡಲಾಗುತ್ತಿದ್ದು, ತರಬೇತಿ ಸಂಸ್ಥೆಗಳು ಅರ್ಜಿ ಸಲ್ಲಿಸಲು ನವೆಂಬರ್ 08 ಕಡೆಯ ದಿನವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯಕ್ಕೆ ಒಳಪಡುವ ಅಥವಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅನುದಾನಕ್ಕೆ ಒಳಪಟ್ಟಿರುವ ಸಂಘ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದರಿಂದ ಈ ಸಂಬಂಧ ದಾಖಲೆಗಳನ್ನು ಒದಗಿಸುವುದು. ತರಬೇತಿ ನೀಡುವ ಸಂಸ್ಥೆಯು ಸ್ಥಳೀಯ ಸಂಸ್ಥೆಯಾಗಿದ್ದು ತರಬೇತಿಗಳನ್ನು ನೀಡಲು ಎಲ್ಲಾ ಮೂಲಭೂತ ಸೌಕರ್ಯದ ಸೌಲಭ್ಯಗಳನ್ನು ಹೊಂದಿರಬೇಕು. ಕನಿಷ್ಟ 5 ವರ್ಷ ತರಬೇತಿ ನೀಡಿದ ಅನುಭವ ಹೊಂದಿರಬೇಕು. ನುರಿತ ಶಿಕ್ಷಕರನ್ನು ಹೊಂದಿರಬೇಕು. ಆಯ್ಕೆಯಾದ ಸಂಸ್ಥೆ ಇಲಾಖೆಯೊಂದಿಗೆ ರೂ.100 ಛಾಪಾಕಾಗದದಲ್ಲಿ ಕರಾರು ಪತ್ರ ಮಾಡಿಕೊಂಡ ನಂತರವಷ್ಟೇ ತರಬೇತಿಯನ್ನು ನೀಡಲು ಪ್ರಾರಂಭಿಸಬೇಕು. ಹಾಗೂ ಕಚೇರಿ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟಿರಬೇಕು. ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಕಚೇರಿ ಮತ್ತು ದೂ.ಸಂ: 08182-223376 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಕೌಶಲ್ಯಾಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ(ಸಿಎಂಕೆಕೆವೈ)ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.


ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ ತರಬೇತಿಯನ್ನು (260 ಗಂಟೆ ಕಾಲ) ನೀಡಲಾಗುವುದು. ಎಸ್‍ಎಸ್‍ಎಲ್ ಪಾಸ್ ಆದವರು ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ರೂ.2500 ಶಿಷ್ಯ ವೇತನ ನೀಡಲಾಗುವುದು. ನವೆಂಬರ್ 10 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ವಯಸ್ಸು ವಿದ್ಯಾರ್ಹತೆ, ಇತರೆ ದಾಖಲಾತಿಗಳೊಂದಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಶಿವಮೊಗ್ಗ ಇಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂ.ಸಂ: 08182-246054, ಮೊ.ಸಂ: 9449286543/7760323838 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!