ಶಿವಮೊಗ್ಗ: ಕೊರೊನಾದಿಂದ ಮನೆಯೊಳಗೆ ಇರಿ ಎನ್ನುವ ಬದುಕು ಸವೆಸುತ್ತಾ, ನಾಳಿನ ಬಗ್ಗೆ ಚಿಂತಿಸುವ ಸಮಯದಲ್ಲಿ ಸಿಗುವ ಅಲ್ಪ ಹೊತ್ತಿನ ನಿದ್ದೆಗೆ ಕಲ್ಲು ಹಾಕುವ ಕಿರಾತಕ ಮನಸ್ಸುಗಳು ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವುದು ದುರಂತದ ಸಂಗತಿ.
ಕಳೆದ ನಾಲ್ಕು ದಿನದಿಂದಷ್ಟೆ ಸೀಗೆಹಟ್ಟಿ ಸೇರಿದಂತೆ ಹಲವೆಡೆ ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಬೆಂಕಿ ಹಚ್ಚಿದ್ದ ಘಟನೆ ಮರೆಮಾಚುವ ಮುನ್ನವೇ ಮತ್ತೆ ನಿನ್ನೆ ಮಧ್ಯರಾತ್ರಿ ಬಿಬಿ ರಸ್ತೆ ಸೀಗೆಹಟ್ಟಿಯ ಕುಬೇರಪ್ಪ ಎಂಬುವವರು ಬೈಕ್, ಶ್ರೀನಿವಾಸ್ ಎಂಬುವವರ ಆಟೋಗೆ ಬೆಂಕಿ ಹಚ್ಚಿ ವಿಕೃತ ಮನಸ್ಸು ತೋರಿದ್ದಾರೆ.
ಅಂದು ದೊಡ್ಡಪೇಟೆ ಪೊಲೀಸರಿಂದ ಕ್ಷಣ ಮಾತ್ರದಲ್ಲೇ ತಪ್ಪಿಸಿಕೊಂಡು ಬಂದಿದ್ದ ಕಿರಾತಕ ಮನಸ್ಸುಗಳು ಈಗ ಈ ಕೃತ್ಯಕ್ಕಿಳಿರುವುದು ದೊಡ್ಡಪೇಟೆ ಪೊಲೀಸರ ನಿದ್ದೆಗೆಡಿಸಿದೆ. ಮಲ್ಲಿಗೆನಹಳ್ಳಿ ಮಾರ್ಗವಾಗಿ ಆರಂಭಿಸುವ ಈ ಕೃತ್ಯ ಬಿಬಿ ರಸ್ತೆಯ ಸೀಗೆಹಟ್ಟಿ ಭಾಗದ ವಾಹನಗಳನ್ನೇ ಉದ್ದೇಶ ಮಾಡಿಕೊಂಡಿರುವುದು ನಾನಾ ಅನುಮಾನಗಳನ್ನು ಹುಟ್ಟಿಸುತ್ತಿದೆ.
ಕೊರನಾದ ಈ ಹೊತ್ತಿನಲ್ಲಿ ವಿಕೃತ ಮನಸ್ಸುಗಳ ಈ ಕೃಕೃತ್ಯಕ್ಕೆ ಕಡಿವಾಣ ಹಾಕುವ ಅತ್ಯಗತ್ಯತೆ ಇದೆ.