ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿರುವ ಬಾಲಾಜಿರಾವ್ ಅವರನ್ನು ಸೂಕ್ತ ಕಾರಣ ಅಥವಾ ಸಾಕ್ಷಧಾರವಿಲ್ಲದೇ ಸೇವೆಯಿಂದ ಮೊಟಕುಗೊಳಿಸುವ ಜೊತೆಗೆ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಶಿವಪ್ಪ ನಾಯಕ ಕರ್ನಾಟಕ ಸಂರಕ್ಷಣಾ ವೇದಿಕೆ ಆರೋಪಿಸಿದೆ.
ಈ ಸಂಬಂಧ ಪಾಲಿಕೆಯ ಆಯುಕ್ತರಿಗೆ ಪತ್ರ ನೀಡಿರುವ ಅವರು ಇದನ್ನು ಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು, ಅವರ ಸೇವೆ ಮೊಟಕುಗೊಳಿಸಿರುವ ಕ್ರಮವನ್ನು ಬದಲಿಸಬೇಕು ಹಾಗೂ ವರ್ಗಾವಣೆ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದೆ.
ಕೊರೊನಾದಂತಹ ಇಂತಹ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ಗಣನೀಯ ಸೇವೆ ಮಾಡಿರುವ ಅವರ ಕಾರ್ಯವನ್ನು ಸಹಿಸದ ಕೆಲವರು ಅವರ ವಿರುದ್ಧ ಇಲ್ಲ ಸಲ್ಲದ ಗೂಬೆ ಕೂರಿಸಿ ತಮ್ಮ ಸ್ವಂತ ಕಾರ್ಯಸಿದ್ದಿಗಾಗಿ ರಾಜಕಾರಣಿಗಳ ಪ್ರಭಾವ ಬೀರಿ ಈ ಕೃತ್ಯಕ್ಕೆ ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ.
ಯಾವುದೇ ಕಾರಣ ಅಥವಾ ನೋಟೀಸ್ ನೀಡದೇ ಏಕಾ ಏಕಿ ಕ್ರಮ ಕೈಗೊಂಡಿರುವುದು ಸರಿಯಲ್ಲ. ತಾವುಗಳು ಇದರ ಬಗ್ಗೆ ಮರುಪರಿಶೀಲನೆ ನಡೆಸಿ ಲೋಪದೋಷ ಕಂಡು ಬರದಿದ್ದಲ್ಲಿ ನಿಷ್ಠಾವಂತ ಅಧಿಕಾರಿ ಬಾಲಾಜಿ ರಾವ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಬೇಕೆಂದು ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಕೆ.ಸಂಜೀವ್ ಕುಮಾರ್ ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!