ಶಿವಮೊಗ್ಗ, ಜು.೧೭:
ಅನುದಾನ ರಹಿತ ಶಾಲಾ ಶಿಕ್ಷಕರು ಕರ್ತವ್ಯದಲ್ಲಿರುವಾಗ ಅನಿರೀಕ್ಷಿತ ಸಾವು ಸಂಭವಿಸಿದರೆ ಅವರ ಬದುಕಿಗೆ ನೆಲೆ ಕಟ್ಟಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಭದ್ರಾವತಿ ತಾಲ್ಲೂಕಿನ ಈಶ್ವರಮ್ಮ ಪ್ರೌಢಶಾಲಾ ಶಿಕ್ಷಣ ಸಂಸ್ಥೆಯ ಶಿಕ್ಷಕ ಎನ್.ಎಂ. ಕುಮಾರ್ ಅವರ ನಿಧನ ವಾರ್ತೆ ಆತಂಕ ಹಾಗೂ ದುಂಖದ ಸಂಗತಿ. ಜನಾನುರಾಗಿ ಹಾಗೂ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷರ ಸಂಘ ತೀವ್ರ ಸಂತಾಪ ಸೂಚಿಸಿದೆ.
ಮೃತ ಶಿಕ್ಷಕರು ಅನುದಾನರಹಿತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆ ಆಡಳಿತ ಮಂಡಳಿ ನೀಡುವ ವೇತನದಲ್ಲಿ ಜೀವನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಶ್ಲಾಘನೀಯ ಕಾರ್ಯ ಎಂದಿದೆ.
ಇದೇ ಸಂದರ್ಭದಲ್ಲಿ ಶಿಕ್ಷಕರ ಒಕ್ಕೂಟ ಸಂಘಗಳ ನೆರವಿನಿಂದ ದೊಡ್ಡಮಟ್ಟದ ನೆರವು ನೀಡಿರುವುದು ಗಮನೀಯ ವಿಚಾರ. ಈ ಸಂದರ್ಭದಲ್ಲಿ ಸಕಾರ್ಕಾರ ಮದ್ಯ ಪ್ರವೇಶಿಸಿ ನಿಧನರಾದ ಕುಟುಂಬದ ನಂತರದ ಬದುಕಿಗೆ ಪೂರಕವಾದ ನೆರವು ನೀಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ ಹಾಗೂ ಪದಾದಿಕಾರಿಗಳು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!