ಶಿವಮೊಗ್ಗ, ಜು.17: ಕೋವಿಡ್ 19 ಕರಾಳ ಕೊರೊನಾ ಸೊಂಕಿತರ ಸಾವಿನ ಪ್ರಕರಣ ಹೆಚ್ಚುತ್ತಲೇ ಇದೆ.
ಇಂದು ಮತ್ತೊರ್ವ ಕೊರೊನಾ ಸೊಂಕಿತ 56 ವರ್ಷ ವಯಸ್ಸಿನ ಮಹಿಳೆ ಸಾವು ಕಂಡಿರುವ ಬಗ್ಗೆ ನಿಖರ ಮೂಲಗಳು ಮಾಹಿತಿ ನೀಡಿವೆ.
ನಿನ್ನೆ ಎರಡು ಸಾವು ಎಂದಿದ್ದ ಪ್ರಕರಣದಲ್ಲಿ ಓರ್ವರ ಸಾವು ಅನ್ಯ ಕಾಯಿಲೆ ಎಂದು ಹೇಳಲಾಗಿದೆ.
ಈಗ ಒಟ್ಟಾರೆ ಸಾವು 13ಎಂದು ದಾಖಲಾಗಿದ್ದು, ಈಗಿನ ಪ್ರಕರಣ ಮತ್ತೊಂದು ಸಾವನ್ನ ಸೇರಿಸಲಿದೆ.
ನಿನ್ನೆ ಸಂಜೆ ಬಿತ್ತರವಾದ ವರದಿಯಲ್ಲಿ 58ಸೊಂಕಿತರ ನಡುವೆ ಶಿವಮೊಗ್ಗ ನಗರದ್ದೇ ಮೇಲುಗೈ. ಶಿವಮೊಗ್ಗ ಜಿಲ್ಲೆಯಲ್ಲದೇ ಅನ್ಯ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಗಳೂರಿನ ಕೆಲ ಸೊಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ದಾಖಲೆ ಇಲ್ಲಿ ನಮೂದಾಗಿರುತ್ತಿದೆ.
ಈ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.