ತೀರ್ಥಹಳ್ಳಿಯಲ್ಲಿ ಗ್ರೇಟ್ ವರ್ಕ್!

ಶಿವಮೊಗ್ಗ, ಜು.16: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ‌ಕಾರು ಮಾಲೀಕರು ಸರ್ಕಾರಿ ‌ನೌಕರರು‌ BPL ಕಾರ್ಡ್ ಹೊಂದಿದ್ದರೆ ದಂಡ ಕಟ್ಟುವುದು ಅನಿವಾರ್ಯ. ಇದು ಹೊಸ ಕಾನೂನೇನಲ್ಲ. ಬರೋಬ್ಬರಿ ವರುಷದಿಂದ ಈ ನಿಯಮ ಇದೆ.
ಆದರೆ, ತಣ್ಣನೆಯ ಜಾಗದಲ್ಲಿ ಬೆಚ್ಚಗೆ ಮಲಗಿರುವ ಅಧಿಕಾರಿಗಳಿಗೆ ಇತ್ತ ನೋಡಲು ಸಮಯವೇ ಇಲ್ಲ. ಹುಕಾಡಿದ ಚಿಕ್ಕ ನಿದರ್ಶನಗಳು ಶಿವಮೊಗ್ಗ ನಗರದಲ್ಲಿ ಇಲ್ಲವೇ ಇಲ್ಲ!
ಈ ವಿಚಾರಕ್ಕೆ ಬಡಿದೆಚ್ಚರಿದಿದ ಕಾರ್ಯವನ್ನು ತೀರ್ಥಹಳ್ಳಿ ಅಧಿಕಾರಿಗಳು ಹಾಗೂ
ಈಗಾಗಲೇ ಸಿಬ್ಬಂದಿಗಳು ಮಾಡಿದ್ದಾರೆ. ಇದರ ಮೂಲಕ‌ಕೆಲಸ ಮಾಡದ ಅಧಿಕಾರಿಗಳಿಗೆ ಪರೋಕ್ಷವಾಗಿ ಕ್ಯಾಕರಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ಸಂಬಂಧ ‌2 ಲಕ್ಷದ 50 ಸಾವಿರ ರೂಪಾಯಿ ದಂಡ ವಸೂಲಾಗಿದೆಯೆಂಬ ಮಾಹಿತಿ ಲಭ್ಯವಾಗಿದೆ.
ತಾಲ್ಲೂಕಿನ ಅನೇಕ ಕಾರು ಮಾಲೀಕರು, ಸರ್ಕಾರಿ ನೌಕರರು ಸರ್ಕಾರ‌ ಅನೇಕ ಬಾರಿ ಗಡುವು ನೀಡಿದ್ದರೂ ಸಹ BPL ಕಾರ್ಡ್ ಹಿಂದಿರುಗಿಸಿ APL ಕಾರ್ಡ್ ಪಡೆದಿರುವುದಿಲ್ಲ. ಆ ಕಾರಣ ಸರ್ಕಾರಿ ಫಲಾನುಭವಿ ಅಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರು ಈ ಹಿಂದೆ ಪಡೆದ ಪಡಿತರದ ಪ್ರತಿ ಕೆಜಿಗೆ 34 ರೂಪಾಯಿ 87ಪೈಸೆ ವಸೂಲಿ ಮಾಡಲು ಸರ್ಕಾರ ಸೂಚಿಸಿದ್ದು ಆ ಹಿನ್ನೆಲೆಯಲ್ಲಿ ಅನರ್ಹ ಫಲಾನುಭವಿಗಳಾದ ಕಾರು ಮಾಲೀಕರು, ಸರ್ಕಾರಿ ನೌಕರರಿಗೆ ದಂಡ ವಿಧಿಸಿ ಬಿಪಿಎಲ್ ಕಾರ್ಡ್ ರದ್ದು ಪಡಿಸಿ ಎಪಿಎಲ್ ಕಾರ್ಡ್ ನೀಡಲಾಗುತ್ತಿದೆ ಎಂದು ತೀರ್ಥಹಳ್ಳಿ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಉಳಿದ ಅಧಿಕಾರಿಗಳಿಗೆ ಬಾರಿಸಿದ ಎಚ್ಚರಿಕೆ ಗಂಟೆಯಾಗುತ್ತಾ…?!

By admin

ನಿಮ್ಮದೊಂದು ಉತ್ತರ

error: Content is protected !!