ತುಂಗಾತರಂಗ ವರದಿ
ಶಿವಮೊಗ್ಗ, ಜು.16:
ಸಾಲ ಮಾಡಿಕೊಡಿಸಲು ಲಂಚ ಸ್ವೀಕರಿಸುತ್ತಿದ್ದ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತದ ಲಡ್ಜರ್ ಕೀಪರ್ ಎಂ. ಎಸ್. ಸುನೀತಾ ಅವರು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿಕಾರಿಪುರ ತಾ. ಬಗನಕಟ್ಟೆಯ ಮಲ್ಲೇಶಪ್ಪ ಎಂಬುವವರು ಸಾಲಕ್ಕೆ ಇಲ್ಲಿ ಅರ್ಜಿ ಹಾಕಿದ್ದರು. ಅವರ ಪೈಲ್ ಮೂವಾಗಲು ಒಂದು ಸಾವಿರ ಲಂಚ ಕೇಳಿದ್ದ ಸುನೀತಾ ವಿರುದ್ದ ಭ್ರಷ್ಟಾಚಾರ ನಿಗ್ರಹ ಧಳ (ಎಸಿಬಿ)ದ ಮೊರೆಹೋಗಿದ್ದರು.
ಇಂದು ಸಂಜೆ ಎಸಿಬಿ ಡಿವೈಎಸ್ ಪಿ ಜೆ. ಲೋಕೇಶ್, ಇನ್ಸ್ ಪೆಕ್ಟರ್ ಗಳಾದ ಎನ್. ವೀರೇಂದ್ರ, ಜೆ.ಎಸ್. ತಿಪ್ಪೇಸ್ವಾಮಿ ಅವರ ತಂಡ ದಾಳಿ ನಡೆಸಿದೆ.
ಜಿ.ಪಂ. ಕಛೇರಿ ಹಿಂಬಾಗದ ಈ ಬೋರ್ಡ್ ಗೆ ದಾಳಿ ನಡೆಸಿದ ಎಸಿಬಿ ಒಂದು ಸಾವಿರದೊಂದಿಗೆ ಲಂಚ ಸ್ವೀಕರಿಸಿದ್ದ ಸುನೀತಾ ಅವರನ್ನು ಬಂಧಿಸಿದ್ದಾರೆ.