ಶಿವಮೊಗ್ಗ: ಪತ್ರಿಕೆ ಮೂಲಗಳ ಪ್ರಕಾರ ಶಿವಮೊಗ್ಗ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಮತ್ತಿಬ್ಬರು ಕೊರೊನಾ ಸೋಂಕಿತರು ಸಾವು ಕಂಡಿದ್ದಾರೆ. ಬೀರೂರು ಮೂಲದ 60 ವರ್ಷ ಮಹಿಳೆ ಹಾಗೂ ತುಂಗಾ ನಗರ ಮೂಲದ 55 ವರ್ಷದ ಮಹಿಳೆಯೊಬ್ಬರು ಸಾವು ಕಂಡಿರುವುದಾಗಿ ಮೂಲಗಳು ಹೇಳಿದ್ದು, ಇಂದು ಸಂಜೆ ಇವರ ಅಂತ್ಯಕ್ರಿಯೆ ನಡೆಯಲಿದೆ. ಅಂತೆಯೇ ಇಂದು ಕೊರೊನಾ ಸೋಂಕಿತರ ಸಂಖ್ಯೆ ಅತಿ ಹೆಚ್ಚು ಪತ್ತೆಯಾಗುತ್ತಿವೆ ಎಂದು ಮೂಲಗಳು ಹೇಳಿದ್ದು, ಸಂಜೆ ಬಿಡುಗಡೆಯಾಗುವ ವರದಿಯಲ್ಲಿ ಕನಿಷ್ಠ 60 ಕ್ಕಿಂತ ಹೆಚ್ಚು ಪ್ರಕರಣಗಳು ಹೊರಬರಲಿವೆ ಎನ್ನಲಾಗಿದೆ. ಇದರಲ್ಲಿ ಶಿವಮೊಗ್ಗ ನಗರದ್ದೇ ಅಗ್ರಪಾಲು ಎಂದು ಹೇಳಲಾಗುತ್ತಿದೆ.


By admin

ನಿಮ್ಮದೊಂದು ಉತ್ತರ

error: Content is protected !!