ಶಿವಮೊಗ್ಗ, ಜು.16: ಮನೆಯ ಹಂಚಿನ ಸಂದಿಯೊಳಗಿದ್ದು ಭಯದ ವಾತಾವರಣ ನಿರ್ಮಿಸಿದ್ದ
ಬರೋಬ್ಬರಿ ಎರಡು ಆಳು ಉದ್ದದ ಅಂದರೆ ಹನ್ನೊಂದು ಅಡಿಯ , 6ಕೆಜಿ 800ಗ್ರಾಂ ತೂಕದ ಹಾಗೂ ಹತ್ತು ಇಂಚು ಸುತ್ತಳತೆಯ ಕಾಳಿಂಗಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿನೊಳಗೆ ಬಿಟ್ಟು ಬಂದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಬಾಂಡ್ಯ ಗ್ರಾಮದ ಮಂಜುನಾಥ್ ಅವರ ಮನೆಯ ಅಟ್ಟದ ಮೇಲಿದ್ದ 11 ಅಡಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸ್ನೇಕ್ ಕಿರಣ್ ಸಕಾರಾತ್ಮಕವಾಗಿ ಗ್ರಾಮಸ್ಥರ ಸಹಕಾರದಿಂದ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಅರಣ್ಯ ಇಲಾಖೆ ಬೆಜ್ಜವಳ್ಳಿ ಗಸ್ತಿನ ರಕ್ಷಕ ಬಸವರಾಜ್ ಅವರ ಸಮ್ಮುಖದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.