ಶಿವಮೊಗ್ಗ : ರಾಷ್ಟ್ರೀಯ ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯದ ಕೀಲಿಕೈ ಇದ್ದ ಹಾಗೆ ಎಂದು ಮೈಸೂರಿನ ಎಲ್.ಎಲ್.ಸಿ. ಎಜು ಕೇಷನ್ ಕನ್ಸಲ್ಟ್ ಇಂಕ್ತಕ್ ಸರ್ವೀಸ್ ಪ್ರಾಂಶು ಪಾಲೆ ಡಾ. ಎಲ್. ಸವಿತಾ ಹೇಳಿದರು
ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಭವ್ಯ ಭಾರತ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ ಕಾರ್ಯಾಗಾರ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ೩ ವರ್ಷದಿಂದ ೨೧ ವರ್ಷಗಳ ಕಾಲ ಮಗುವನ್ನು ಶಾಲೆ ಎಂಬ ಕೊಠಡಿಯಲ್ಲಿ ಕೂಡಿ ಹಾಕಿ ಕೇವಲ ಪಠ್ಯಕ್ರ ಮದ ವಿಷಯವನ್ನು ಕಲಿಸುತ್ತಿದ್ದೇವೆ ಹೊರತು ಕೌಶಲ್ಯ ಕಲಿಸುತ್ತಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣದ ಜೊತೆ ಬದುಕುವ ಕೌಶಲ್ಯವನ್ನು ಮತ್ತು ಜೀವನಕ್ಕೆ ಬೇಕಾದ ಜ್ಞಾನವನ್ನು ತಿಳಿಸಿ ಕೊಡುವ ಕಾರ್ಯವನ್ನು ರೂಪಿಸಲಾಗಿದೆ ಎಂದು ಹೇಳಿದರು.
ನೂತನ ಶಿಕ್ಷಣ ನೀತಿ ಅದ್ಭುತವಾಗಿದ್ದು, ಪರಿವರ್ತನಾ ಸುಧಾರಣೆ ತರಬೇಕೆನ್ನುವ ಉದ್ದೇಶದಿಂದ ಮತ್ತು ಯಾವ ಯಾವ ಹಂತದಲ್ಲಿ ಯಾವ ರೀತಿಯ ಶಿಕ್ಷಣ ಬೇಕು ಎಂದು ಮನಗಂಡು ಈ ನೀತಿಯನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳ ಮತ್ತು ಸಮಾನತೆಯ ಶಿಕ್ಷಣ, ಗುಣಮಟ್ಟದ ಶಿಕ್ಷಣ, ಸಾಮಾರ್ಥ್ಯ ಆಧರಿತ ಶಿಕ್ಷಣ ಮತ್ತು ಅಕೌಟೆಬಿ ಲಿಟಿ(ಹೊಣೆಗಾರಿಕೆ) ದೃಷ್ಠಿಯಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಲಾಗಿದೆ. ಅವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಹೊಂದುವಂತಹ ಶಿಕ್ಷಣ ವನ್ನು ರೂಪಿಸಲಾಗಿದ್ದು, ಮಕ್ಕಳ ಸಾಮರ್ಥ್ಯವನ್ನು ಹೊರಗೆ ತರುವುದು ಶಿಕ್ಷಕರ ಕರ್ತವ್ಯ ಎಂದರು.
ಪ್ರಿಕೆಜಿಯಿಂದ ಎರಡನೇ ತರಗತಿವರೆಗೆ ಕೇವಲ ಸಂಖ್ಯಾ ಶಾಸ್ತ್ರ, ಭಾಷಾ ಶಾಸ್ತ್ರ, ಕತೆ, ಆಟ, ಪಾಠ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಮಾಡುವುದು, ೩,೪, ೫ ನೇ ತರಗತಿ ಯಲ್ಲಿ ಚಟುವಟಿಕೆಗಳ ಮೂಲಕ ಆಲೋಚನೆ ಅಭಿವೃದ್ಧಿಪಡಿಸುವುದು, ೬,೭,೮ ರಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ಈ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದ್ದು, ಸಮಗ್ರತೆಗೆ ಒತ್ತು ನೀಡಲಾಗಿದೆ ಎಂದರು.
ಕಾರ್ಯಕ್ರಮವ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯುವ ಶಕ್ತಿಯೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಕೌಶಲ್ಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅರಿವು ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಅನಿಲ್ ಪಿ. ಶೆಟ್ಟಿ, ಪ್ರತಿಭಾ ಅರುಣ್ ಮತ್ತಿತರರಿದ್ದರು.