ಚಿಕ್ಕಮಗಳೂರು: ಜಿಲ್ಲೆಯ ಉದ್ದೇಬೋರನಹಳ್ಳಿಯಲ್ಲಿ ಟಿವಿಎಸ್ ಬೈಕ್ ಹಾಗೂ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಹಾಗೂ ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಯಣ್ಣ (58) ಹಾಗೂ ರಕ್ಷಿತಾ (19) ಮೃತ ದುರ್ದೈವಿಗಳು. ಮಗಳ ಮನೆಗೆ ಬಾಗಿನ ಕೊಟ್ಟು ವಾಪಸ್ ಆಗಿತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ತಂದೆ ಹಾಗೂ ಮಗಳು ಬೈಕ್ ನಲ್ಲಿ ಪಿಳ್ಳೇನಹಳ್ಳಿಯಿಂದ ಮುಗುಳವಳ್ಳಿಗೆ ಹೋಗುತ್ತಿದ್ದರು.
ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿದೆ.