ಕೊರೊನಾ ಕಾಡುವಿಕೆಗೆ ಮುಕ್ತಿ ಸಿಗದಿದ್ದರೂ ಹಬ್ಬದ ನೆಪದಲ್ಲಾದರೂ ಕೊಂಚ ಸಂಭ್ರಮಿಸುವ ಯೋಚನೆಯಲ್ಲಿದ್ದ ಜನರಿಗೆ ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯದ ವಸ್ತುಗಳ ಬೆಲೆ ಗಗನಕ್ಕೇರಿರುವುದು ಬೇಸರ ಮೂಡಿಸಿದೆ. ಆದರೂ ವಿಧಿ ಇಲ್ಲದೇ ಹಬ್ಬದಾಚರಣೆಗೆ ಜನ ಸಕಲ ಸಿದ್ದರಾಗುತ್ತಿದ್ದಾರೆ.


ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಕೇಳಿದರೆ ವಿಘ್ನೇಶನ ಹಬ್ಬದ ಖುಷಿಗೆ ವಿಘ್ನ ಎದುರಾದಂತೆ ಕಾಣುತ್ತಿದೆ.
ಕೊರೊನಾ ನಡುವೆಯೂ ಮೈಮರೆತು ಗುಂಪುಗುಂಪಾಗಿ ಮಾರುಕಟ್ಟೆಗಳತ್ತ ಧಾವಿಸಿದ ಜನ ಕೊರೊನಾಕ್ಕಿಂತಲೂ ಬೆಲೆ ಏರಿಕೆಗೇ ಹೆಚ್ಚು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭಕ್ಕಿಂತಲೂ ದುಬಾರಿಯಾಗಿರುವ ಹಾಗೂ ಕಳೆದ ವಾರಕ್ಕಿಂತಲೂ ದುಪ್ಪಟ್ಟಾಗಿರುವ ಹೂವು, ಹಣ್ಣುಗಳ ಬೆಲೆ ಮಾರುಕಟ್ಟೆಯಲ್ಲಿ ಹೇಗಿದೆ ಗೊತ್ತಾ…?

ಕೆಜಿ ಹೂವಿನ ಬೆಲೆ ಎಷ್ಟು?

ಕನಕಾಂಬರ 2 ಸಾವಿರ ರೂ.
ಮಲ್ಲಿಗೆ 1 ಸಾವಿರದಿಂದ 1,200 ರೂ.
ಮಲ್ಲೇ ಹೂ 600 ರಿಂದ 800 ರೂ,
ಕಾಕಡ 400 ರಿಂದ 600 ರೂ,
ಸುಗಂಧರಾಜ – 350 ರಿಂದ 400 ರೂ,
ಗುಲಾಬಿ 300 ರೂ,
ಸೇವಂತಿಗೆ 150 ರೂ,
ಸೇವಂತಿಗೆ ಒಂದು ಮಾರಿಗೆ 130 ರೂ,
ಎಕ್ಕದ ಹೂವಿನ ಹಾರ 80 ರಿಂದ 100 ರೂ,
ಚೆಂಡು ಹೂವು ಒಂದು ಮಾರಿಗೆ 50 ರೂ.,
ತುಳಸಿ ಒಂದು ಮಾರಿಗೆ 50 ರಿಂದ 80 ರೂ.,
ಬಿಲ್ವಪತ್ರೆ ಒಂದು ಕಟ್ಟಿಗೆ 40 ರೂ.

ಕೆಜಿ ಹಣ್ಣಿನ ಬೆಲೆ ಎಷ್ಟಿದೆ?

ಸೇಬು 120 ರಿಂದ 140 ರೂ.
ದಾಳಿಂಬೆ 130 ರಿಂದ 150 ರೂ.
ಮೂಸಂಬಿ 40 ರೂ.
ಬಾಳೆಹಣ್ಣು 70 ರಿಂದ 80 ರೂ.
ಒಂದು ಜೋಡಿ ಪೈನಾಪಲ್ 100
ಕಿತ್ತಳೆ 80 ರೂ.
ಸೀತಾಫಲ 60 ರೂ.
ಸಪೋಟ 50 ರೂ.
ಬೇರಿಕಾಯಿ 130 ರೂ.
ದ್ರಾಕ್ಷಿ 150 ರಿಂದ 180 ರೂ.
ಸೀಬೇಹಣ್ಣು 80 ರೂ.
ಒಂದು ತೆಂಗಿನಕಾಯಿ ಬೆಲೆ 25 ರಿಂದ 35 ರೂ.
ವೀಳ್ಯದೆಲೆ ಒಂದು ಕಟ್ಟು- 80 ರಿಂದ 100 ರೂ.
ಮಾವಿನ ಸೊಪ್ಪು ಒಂದು ಕಟ್ಟು 30 ರೂ.
ಒಂದು ಜತೆ ಬಾಳೆ ಕಂದು 40 ರಿಂದ 60 ರೂ.
ಒಂದು ಕಟ್ಟು ಗರಿಕೆಗೆ 30 ರೂ.

By admin

ನಿಮ್ಮದೊಂದು ಉತ್ತರ

error: Content is protected !!