ಸಾಗರ :ತಾಲೂಕಿನ ಬೃಂಗಿ ಮಠದ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವರ ಸಾವು ಕಂಡಿದ್ದು, ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬೈಕ್ ಸವಾರ ನರೇಂದ್ರ ಮೃತಪಟ್ಟ ದುರ್ದೈವಿ. ಬೈಕಿನ ಹಿಂದೆ ಕೂತಿದ್ದ ಪತ್ನಿ ರಾಜೇಶ್ವರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇವರು ಮೂತಃ ಸಾಗರ ತಾಲೂಕಿನ ನಿಟ್ಟೂರಿನ ದಂಪತಿಗಳು ಶಿವಮೊಗ್ಗದ ಗೋಪಾಳದಲ್ಲಿ ವಾಸವಾಗಿದ್ದರು. ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.