ಅಂತೂ ಇಂತು ರಾಜ್ಯದ ಮೊದಲ ಹಂತದ ಸಚಿವ ಸಂಪುಟ ರಚನೆಯಾಗಿದೆ. ಸಂಘಪರಿವಾರದ ಹಿನ್ನೆಲೆಯುಳ್ಳ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ 24 ಶಾಸಕರು ಸಚಿವಗಿರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈಶ್ವರಪ್ಪ ಅವರ ಪರವಾಗಿ ದ್ವನಿ ಆರಂಭಗೊಂಡ ಪೂರ್ವದಲ್ಲಿ ನಿಮ್ಮ ತುಂಗಾತರಂಗ ಹಿರಿಯರಾದ ಈಶ್ವರಪ್ಪರಿಗೆ ಸಚಿವಗಿರಿ ಖಾಯಂ ಎಂದೇ ಹೇಳಿತ್ತು. ಅದಕ್ಕೆ ಕೋರಿಕೆ ಅನಗತ್ಯ ಎಂದೂ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಒಟ್ಟು 29 ಶಾಸಕರಿಗೆ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ.
ಈ ನಡುವೆ ಪಟ್ಟಿಯಲ್ಲಿ ಹೆಸರಿಲ್ಲದ ಕೆಲ ಶಾಸಕರು ಬಂಡಾಯವೆದ್ದಿದ್ದಾರೆ. ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ಆಕ್ರೋಶ ಕಣ್ಣೀರದಾರೆಯಾಗಿ ಹರಿದಿದೆ.
ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ
ದಾವಣಗೆರೆ, ಕೋಲಾರ, ಯಾದಗಿರಿ, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಈ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ಆದರೆ ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿಗಳ ಇದ್ದಾರೆ.
ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಓಲೇಕಾರ್ ಬೆಂಬಲಿಗರು ಸಿಎಂ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ನಮ್ಮ ಕ್ಷೇತ್ರದವರು ಎಂಬ ಕಾರಣಕ್ಕೆ ತನಗೆ ಸಚಿವ ಸ್ಥಾನ ನಿರಾಕರಿಸಿರುವುದು ಸರಿಯಲ್ಲ ಎಂದು ನೆಹರು ಓಲೇಕಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಬಿ.ಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಮತ್ತು ಆಪ್ತರಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರಗೊಂಡಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಎಚ್ಚರಿಕೆ ನೀಡಿದ್ದರು. ಅವರು ಹೆಸರು ಸಹ ಪಟ್ಟಿಯಲ್ಲಿಲ್ಲ.
ಮಾಜಿ ಸಿಎಂ ಬಿಎಸ್ವೈರವರ ಪುತ್ರ ಬಿ.ವೈ ವಿಜಯೇಂದ್ರರವರಿಗೆ ಸಚಿವ ಸ್ಥಾನ ನೀರಿಕ್ಷಿಸಲಾಗಿತ್ತು. ಆದರೆ ಅವರ ಹೆಸರು ಪಟ್ಟಿಯಲ್ಲಿಲ್ಲ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸಮಜಾಯಿಸಿ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಚಿವರಾದವರ ವಿವರ:
Final list…
1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
2.ಆರ್.ಅಶೋಕ್- ಪದ್ಮನಾಭ ನಗರ
3.ಬಿಸಿ ಪಾಟೀಲ್ – ಹಿರೇಕೇರೂರು
4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
6.ಉಮೇಶ್ ಕತ್ತಿ- ಹುಕ್ಕೇರಿ
7.ಎಸ್.ಟಿ.ಸೋಮಶೇಖರ್- ಯಶವಂತಪುರ
8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
9.ಬೈರತಿ ಬಸವರಾಜ – ಕೆ ಆರ್ ಪುರಂ
10.ಮುರುಗೇಶ್ ನಿರಾಣಿ – ಬಿಳಿಗಿ
11.ಶಿವರಾಂ ಹೆಬ್ಬಾರ್- ಯಲ್ಲಾಪುರ
12.ಶಶಿಕಲಾ ಜೊಲ್ಲೆ- ನಿಪ್ಪಾಣಿ
13.ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ
14.ಸುನೀಲ್ ಕುಮಾರ್ – ಕಾರ್ಕಳ
15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
16.ಗೋವಿಂದ ಕಾರಜೋಳ-ಮುಧೋಳ
17.ಮುನಿರತ್ನ- ಆರ್ ಆರ್ ನಗರ
18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
21.ಹಾಲಪ್ಪ ಆಚಾರ್ – ಯಲ್ಬುರ್ಗ
22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
24.ಪ್ರಭು ಚೌವ್ಹಾಣ್ – ಔರಾದ್
25.ವಿ ಸೋಮಣ್ಣ – ಗೋವಿಂದ್ ರಾಜನಗರ
26.ಎಸ್ ಅಂಗಾರ-ಸುಳ್ಯ
27.ಆನಂದ್ ಸಿಂಗ್ – ಹೊಸಪೇಟೆ
28.ಸಿ ಸಿ ಪಾಟೀಲ್ – ನರಗುಂದ
29.ಬಿಸಿ ನಾಗೇಶ್ – ತಿಪಟೂರು
ಸಚಿವ ಸ್ಥಾನ ವಂಚಿತರು
ಜಗದೀಶ್ ಶೆಟ್ಟರ್
ಸುರೇಶ್ ಕುಮಾರ್
ಅರವಿಂದ ಲಿಂಬಾವಳಿ
ಲಕ್ಷ್ಮಣ ಸವದಿ
ಯೋಗೇಶ್ವರ್
ಆರ್.ಶಂಕರ್
ಶ್ರೀಮಂತ ಪಾಟೀಲ್
