ಸಣ್ಣ ಪ್ರಶ್ನೆಯು ಹೊಸ ಆವಿಷ್ಕಾರವನ್ನೇ ಮಾಡುತ್ತದೆ. ಮಕ್ಕಳು ಪ್ರಶ್ನೆ ಮಾಡಿದಾಗ ನಿನಗೆ ಯಾಕೆ ಎಂದು ಪ್ರಶ್ನಿಸದೆ ಮಕ್ಕಳಿಗೆ ಪ್ರೇರಣೆ ನೀಡುವ ಅಗತ್ಯವಿದೆ ಎಂದು ವಾಗ್ಮಿ, ಚಿಂತಕ ಡಾ. ರಾಹುಲ್ ದೇವರಾಜ್ ಹೇಳಿದರು. ಉಡುಪಿ ಜಿಲ್ಲೆಯ ಕೋಟದ ಕಾರಂತ ಕಲಾಭವನದಲ್ಲಿ

ಕೋಟತಟ್ಟು ಗ್ರಾ.ಪಂ., ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2026ನೇ

ಸಾಲಿನ ಡಾ|| ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕಾರಂತರು ಬಾಲವನದ ಮೂಲಕ

ಮಕ್ಕಳಲ್ಲಿ ಕೌತುಕ ಹಾಗೂ ಕೌಶಲ್ಯ ಮೂಡಿಸುವ ಕೆಲಸ ದಶಕಗಳ ಹಿಂದೆಯೇ ಮಾಡಿ ತೋರಿಸಿದ್ದಾರೆ. ಶಿವರಾಮ ಕಾರಂತರು ಎಂದರೆ ಅದೊಂದು ಬುದ್ಧಿಶಕ್ತಿಯ ಭಂಢಾರವಿದ್ದಂತೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಈ ವೇಳೆ 2025ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಎ ಎಸ್ ಏನ್ ಹೆಬ್ಬಾರ್ ರವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಉದ್ಘಾಟಿಸಿದರು.

ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಎ. ಗಫೂರ್, ಆನಂದ್ ಸಿ. ಕುಂದರ್ , ಯು.ಎಸ್.ಶೆಣೈ,

ನರೇಂದ್ರ ಕುಮಾರ್ ಕೋಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.