ಶಿವಮೊಗ್ಗ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿರುವ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಕೂಡಲೇ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಈ. ಕಾಂತೇಶ್ ಆಗ್ರಹಿಸಿದರು.

ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಮಿಳುನಾಡಿನ ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ಮಾಸದ ಪೂರ್ಣಿಮೆಯಂದು ಹಲವು ವರ್ಷಗಳಿಂದ ದೀಪ ಬೆಳಗಿಸುವ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ದೀಪ ಬೆಳಗಿಸಲು ಸರ್ಕಾರ ಅವಕಾಶ ನೀಡದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.

ಈ ಸಂಬಂಧ ದೀಪಸ್ತಂಭದಲ್ಲಿ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಷ್ಟ್ರಭಕ್ತರ ಬಳಗ ಸ್ವಾಗತಿಸುತ್ತದೆ. ನ್ಯಾಯಾಲಯದ ಆದೇಶವು ಧಾರ್ಮಿಕ ಆಚರಣೆಗಳ ಹಕ್ಕನ್ನು ಎತ್ತಿಹಿಡಿದಿದೆ ಎಂದರು.

ಸರ್ಕಾರಗಳು ಸಂವಿಧಾನಕ್ಕೆ ಗೌರವ ನೀಡುವುದರ ಜತೆಗೆ ಧಾರ್ಮಿಕ ವಿಚಾರಗಳಲ್ಲಿ ಪಕ್ಷಪಾತವಿಲ್ಲದೆ ನಡೆದುಕೊಳ್ಳಬೇಕು. ಒಂದು ಕೋಮಿನ ಪರವಾಗಿ ಮಾತ್ರ ಒಲವು ತೋರುವ ಧೋರಣೆ ಸರಿಯಲ್ಲ. ಎಲ್ಲ ಧರ್ಮಗಳ ಧಾರ್ಮಿಕ ಭಾವನೆ ಹಾಗೂ ಆಚರಣೆಗಳಿಗೆ ಸಮಾನ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
