ಶಿವಮೊಗ್ಗದ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಭಾವಸಾರ ವಿಷನ್ ಇಂಡಿಯಾ ವತಿಯಿಂದ ಪ್ರತಿಷ್ಠಿತ ಮೆಟ್ರೋ ಯೂನೈಟೆಡ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಭಾವಸಾರ ಸಮಾಜ ಬಾಂಧವರಿಗಾಗಿ “ಭಾವಸಾರ ಆರೋಗ್ಯ ಸಪ್ತಾಹ” ಎಂಬ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ನ. 30 ರ ಬೆಳಿಗ್ಗೆ 10.30 ಕ್ಕೆ ಈ ಶಿಬಿರದ ಚಾಲನೆಯನ್ನು ಮಾಜಿ ಉಪಮುಖ್ಯಮಂತ್ರಿಗಳಾದಂತಹ, ಮೆಟ್ರೋ ಆಸ್ಪತ್ರೆ ಪೋಷಕರಾದ ಶ್ರೀಯುತ ಕೆ.ಎಸ್. ಈಶ್ವರಪ್ಪ ಇವರು ನೆರವೇರಿಸಲಿದ್ದು, ಯುವ ಮುಖಂಡರು, ರಾಷ್ಟ್ರಭಕ್ತ ಬಳಗದ ಸಂಚಾಲಕರಾದ ಶ್ರೀಯುತ ಕೆ.ಈ. ಕಾಂತೇಶ್ ಅವರು ಕೂಡ ಉಪಸ್ಥಿತರಿರಲಿದ್ದು, ಭಾವಸಾರ ಬಂಧುಗಳು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದೆ.

ಶಿಬಿರವು ಮೆಟ್ರೋ ಆಸ್ಪತ್ರೆಯಲ್ಲಿಯೇ ನೆರವೇರಲಿದ್ದು, ಶಿಬಿರದ ಫಲಾನುಭವಿಗಳಿಗೆ ಅನುಕೂಲವಾಗಲೆಂದು, ಎಲ್ಲಾ ಸುಸಜ್ಜಿತ ಯಂತ್ರೋಪಕರಣಗಳಿರುವ, ತಜ್ಞ ವೈದ್ಯರ ಸಮೂಹವಿರುವ, ಅನುಭವಿ ಸಿಬ್ಬಂದಿಗಳಿರುವ ಆಸ್ಪತ್ರೆಯಲ್ಲಿಯೇ ನೆರವೇರಿಸಲಾಗುತ್ತಿದೆ. ಶಿಬಿರಾರ್ಥಿಗಳಿಗೆ ಬಿಪಿ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಮೂಳೆ-ಬೆನ್ನು ನೋವು ಸೇರಿದಂತೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶಿಬಿರಕ್ಕೆ ಬರುವ ಸಮಾಜ ಬಂಧುಗಳಿಗೆ ಹೆಸರು ನೋಂದಣಿ ವ್ಯವಸ್ಥೆ ಕೂಡ ಮಾಡಲಾಗಿದೆ.

ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಕಚೇರಿ, ತುಳಜಾಭವಾನಿ ದೇವಾಲಯ, ಗಾಂಧಿ ಬಜಾರ್, ಎಲ್.ಎಲ್.ಆರ್. ರಸ್ತೆಯಲ್ಲಿರುವ ಕಮಲ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಹಾಗೂ ಶ್ರೀರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಮುಖ್ಯ ಕಚೇರಿ ಮತ್ತು ಶಾಖಾ ಕಚೇರಿ, ವೆಂಕಟೇಶ್ ನಗರ ಇಲ್ಲಿ ಪಾಸ್ ಪಡೆದು ಹೆಸರು ನೊಂದಾಯಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆಯ ನುರಿತ ತಜ್ಞ ವೈದ್ಯ, ಸಿಇಓ ಡಾ. ತೇಜಸ್ವಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶಂಕರ್ ನವಲೆ, ಮೆಟ್ರೋ ಆಸ್ಪತ್ರೆ ಮುಖ್ಯಸ್ಥರಾದ ಶ್ರೀಯುತ ಕೆ.ಈ. ಕಾಂತೇಶ್, ಭಾವಸಾರ ವಿಷನ್ ಇಂಡಿಯಾದ ರಾಷ್ಟ್ರೀಯ ಮಾಜಿ ಅಧ್ಯಕ್ಷರು, ಮುಖ್ಯ ಸಂಚಾಲಕರು, ಸಮಾಜದ ಅಧ್ಯಕ್ಷರು ಶ್ರೀಯುತ ಗಜೇಂದ್ರನಾಥ್ ಮಾಳೋದೆ, ಬಿವಿಐ ಶಿವಮೊಗ್ಗ ಅಧ್ಯಕ್ಷರಾದ ಶ್ರೀ ಕಮಲಾಕರ್ ಡಿ.ಪಿ., ಕಾರ್ಯದರ್ಶಿ ಶ್ರೀಮತಿ ಚೇತನಾ ಅಂಬೋರೆ, ಭಾವಸಾರ ಸೊಸೈಟಿ ಅಧ್ಯಕ್ಷ ಶ್ರೀ ಸಂತೋಷ್ ಸಾಕ್ರೆ ಉಪಸ್ಥಿತರಿದ್ದರು.