ಶಿವಮೊಗ್ಗ,ಸೆ.24: ಹಿಂದೂ ಮಹಾಸಭಾದ ಅಂಗ ಸಂಸ್ಥೆಯಾದ ವೀರ ಸಾರ್ವಕರ್ ಹಿಂದೂ ಸಂಘಟನಾ ಮಹಾಮಂಡಳಿ ವತಿಯಿಂದ ಆಚರಿಸಲಾಗುತ್ತಿರುವ 82 ನೇ ವರ್ಷದ ಗಣೇಶೋತ್ಸವದ ಶ್ರೀ ವರಸಿದ್ದ ವಿನಾಯಕ ಸ್ವಾಮಿಯ ಸೆ.25 (ನಾಳೆ) ನಡೆಯಲಿರುವ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಸಕಲ ಸಿದ್ದತೆ ಮಾಡಲಾಗಿದೆ ಎಂದು ಮಹಾಮಂಡಳಿ ಸಹ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಮಂಡಳಿಯಿAದ 1945 ರಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ನಾಳೆ ಬೆಳಿಗ್ಗೆ 9.30 ಕ್ಕೆ ಶ್ರೀ ಸ್ವಾಮಿಯ ಪೂಜಾ ಮೂರ್ತಿಯನ್ನು ವಿಸರ್ಜಿಸಲಾಗುವುದು. ಬೆಳಿಗ್ಗೆ 11 ಗಂಟೆಗೆ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದರು.

ಇಂದು ಸಂಜೆ ವೀರ ಶಿವಮೂರ್ತಿಯವರ ಪುಣ್ಯ ಸ್ಮರಣೆ ಹಾಗೂ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರುತ್ತದೆ ಎಂದರು.
ರಾಜಬೀದಿ ಉತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಗರವೆಲ್ಲಾ ಅಲಂಕಾರಿಗೊAಡಿದೆ. ಪ್ರಮುಖವಾಗಿ ಮಹಾದ್ವಾರಗಳನ್ನು ರಚಿಸಲಾಗಿದೆ. ಅದರಲ್ಲೂ ಗಾಂಧಿ ಬಜಾರ್ನ ಮುಖ್ಯ ದ್ವಾರದಲ್ಲಿ ನೆಲದದಿಂದ 51 ಅಡಿ ಎತ್ತರವಿರುವ ಎದೆಸೀಳಿ ರಾಮ ಮತು ಸೀತೆ ಪ್ರದರ್ಶಿಸುತ್ತಿರುವ ಆಂಜನೇಯ ಕಲಾಕೃತಿ ಮತ್ತು ಎ.ಎ ವೃತ್ತದಲ್ಲಿ ಅಂಬಾ ಭವಾನಿ ಶಿವಾಜಿ ಮಹರಾಜನಿಗೆ ಖಡ್ಗ ನೀಡುತ್ತಿರುವ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಈ ಕಲಾಕೃತಿಗಳನ್ನು ಶಿವಮೊಗ್ಗ ಕಲಾವಿದ ಜೀವನ್ ಮತ್ತು ತಂಡ ನಿರ್ಮಿಸಿದ್ದಾರೆ. ಅಲಂಕಾರವನ್ನು ವಿಕ್ಷಿಸಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ ಎಂದರು.

ನಗರದೆಲ್ಲೆಡೆ ಕೇಸರಿಮಯದಿಂದ ಕೂಡಿದ್ದು, ರಾಜಬೀದಿ ಉತ್ಸವ ಸಾಗುವ ಮಾರ್ಗದಲ್ಲಿ ಸಂಘ-ಸAಸ್ಥೆಗಳು ಪಾನಕ, ಮಜ್ಜಿಗೆ , ಲಘು ಉಪಹಾರ ಏರ್ಪಡಿಸಿವೆ. ವಿವಿಧ ರೀತಿಯ ಸಾಂಸ್ಕೃತಿ ಕಲಾ ತಂಡಗಳ ಮೂಲಕ ರಾಜಬೀದಿ ಉತ್ಸವ ನಡೆಯಲಿದೆ. ರಾಜಬೀದಿ ಉತ್ಸವಕ್ಕೆ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಆದಿಚುಂಚನ ಗಿರಿಯ ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಳದ ಅಧ್ಯಕ್ಷ ಶ್ರೀಧರ್ರಾವ್, ಕಾರ್ಯದರ್ಶಿ ಎ.ಎನ್.ಸತ್ಯನಾರಾಯಣ, ಸಂಚಾಲಕ ದತ್ತಾತ್ರಿ, ಪ್ರಮುಖರಾದ ಹರಿಗೆ ಗೋಪಾಲಸ್ವಾಮಿ, ನಿರಂಜನ್, ರಾಜಶೇಖರ ಅಲಸೆ, ಚೇತನ್, ಚಂದ್ರಶೇಖರ್ ಉಪಸ್ಥಿತರಿದ್ದರು.
=