ಪಬ್ಲಿಕ್ ಮಾತು
ಹುಡುಕಾಟದ ವರದಿ- ಸ್ವಾಮಿ
ಶಿವಮೊಗ್ಗ,ನ.7:
ಸಂಪೂರ್ಣವಾದ ಪರ್ಮಿಷನ್ ಇಲ್ಲದೆ ಎಲ್ಲಿ ಬೇಕೆಂದರಲ್ಲಿ ಪಟಾಕಿ ಅಂಗಡಿಯನ್ನು ಆರಂಭಿಸಲು ಯಾವುದೇ ಅವಕಾಶವಿಲ್ಲ. ಆದರೆ ಇಲ್ಲಿಯವರೆಗೆ ಶಿಕ್ಷಣ ಇಲಾಖೆಯ ಜಾಗ ಎಂಬ ಕಾರಣಕ್ಕೆ, ಮಕ್ಕಳ ಕಲಿಕೆಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಸ್ಥಗಿತಗೊಂಡಿದ್ದ ಸೈನ್ಸ್ ಮೈದಾದ ಪಟಾಕಿ ಮಾರಾಟ ಈಗ ಏಕಾಏಕೀ ಆರಂಭಗೊಂಡಿದೆ.

ಇಂದು ಏಕಾಏಕಿ ಹಲವರು ಶಿವಮೊಗ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಪಟಾಕಿ ವ್ಯವಹಾರ ಆರಂಭಿಸಿದ್ದಾರೆ. ಏಕಾಏಕಿ ಆರಂಭಗೊಂಡ ಅಂಗಡಿಗಳ ಬಗ್ಗೆ ವಿಚಾರಿಸುವುದು ಒತ್ತಟ್ಟಿಗಿರಲಿ, ಈ ಸಂಬಂಧ ಯಾವುದೇ ಅನುಮತಿ ಪಡೆದಿರುವ ಮಾಹಿತಿ ಲಭ್ಯವಾಗಿಲ್ಲ.
ಪಟಾಕಿ ಅಂಗಡಿಯ ಕೆಲವರು ಮೂರು ದಿನಗಳ ಕಾಲ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಒಂದಿಷ್ಟು ಜನರ ಅಧಿಕಾರಿಗಳ ಜೊತೆ ವ್ಯವಹಾರಗಳನ್ನು ಮಾಡುತ್ತಿದ್ದಾರೆ ಎಂಬ ಅನುಮಾನ ಗಂಭೀರವಾಗಿ ಕಾಡುತ್ತಿದೆ.

ಈ ಸಂಬಂಧ ಈ ಬಗ್ಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆಯೇ? ಉಪ ವಿಭಾಗಾಧಿಕಾರಿಗಳು ಎಸ್ ಎಂದಿದ್ದಾರೆಯೇ? ಶಿವಮೊಗ್ಗ ಪೊಲೀಸ್ ಇಲಾಖೆ ಹಾಗೂ ಪರಿಸರ ಮಾನ್ಯ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಅನುಮತಿ ನೀಡಿದೆಯೇ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು.

ಕೇವಲ ಹಣದ ಉದ್ದೇಶಕ್ಕಾಗಿ ಯಾರ ಬದುಕನ್ನು ಹಾಗೂ ಜೀವವನ್ನು ಹಾಳು ಮಾಡುವಂತಹ ಕೆಲಸಕ್ಕೆ ಹೋಗಬಾರದು.
ಸೈನ್ಸ್ ಫೀಲ್ದ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಸಭ್ಯ ಹಾಗೂ ಕುಡುಕರ ಹಾವಳಿಯ ಹಾದಿಯಾಗಿರುವುದು ಆ ಸ್ಥಳೀಯ ಜನರ ಹಾಗೂ ವಿದ್ಯಾರ್ಥಿಗಳ ಅಳಲಾಗಿದೆ.

ಗಮನಿಸುವವರು ಗಮನಿಸಲಿ, ಇಲ್ಲದಿದ್ದರೆ ಓಕೆ ತೊಂದರೆ ಆದರೆ ನೀವೇ ಹೊಣೆಗಾರರಾಗುತ್ತೀರಿ ಎಂಬುದು ಪಬ್ಲಿಕ್ ಹಾಗೂ ಕಾಲೇಜಿನ ಮಕ್ಕಳ ಮಾತು, ಎಚ್ಚರ ಎಚ್ಚರ