ಸೊರಬ ತಾಲ್ಲೂಕಿನ ಜಡೆ ಗ್ರಾಮದ ಶಿವಕುಮಾರ್ ಸ್ವಾಮಿ ಹಾಗೂ ಅರುಣಾ ಆರ್.ಕೆ. ದಂಪತಿಯ ಪುತ್ರ ಕುII ವಿರಾಟ್ ಎಸ್. ಅತ್ಯಂತ ಕಡಿಮೆ ಅವಧಿಯಲ್ಲಿ ‘ಫ್ರೀಸ್ಟೈಲ್ ಎಫ್.ಪಿ.ವಿ (FPV) ಡ್ರೋನ್’ ಅನ್ನು ಜೋಡಿಸುವ ಮೂಲಕ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ (International Book of Records) ತಮ್ಮ ಹೆಸರು ನೋಂದಾಯಿಸಿಕೊಂಡು ವಿಶ್ವ ದಾಖಲೆ ಬರೆದಿದ್ದಾರೆ.

ಪ್ರಸ್ತುತ ಬೆಂಗಳೂರಿನ ಚಂದಾಪುರದಲ್ಲಿರುವ ʻಮೆಗಾ ಇಂಟರ್ನ್ಯಾಷನಲ್ ಸ್ಕೂಲ್ʼನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿರಾಟ್ ಎಸ್. ಈ ಸಾಧನೆಯ ಮೂಲಕ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಸಾಧಕ ವಿರಾಟ್ ಎಸ್. ಪೋಷಕರೊಂದಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಅವರ ಈ ಸಾಧನೆಯ ಮಾಹಿತಿಯನ್ನು ಅವರಿಂದಲೇ ಕೇಳಿ ಸಚಿವರು ಅಭಿನಂಧಿಸಿದರು.

ಇದೇ ಸಂದರ್ಭದಲ್ಲಿ ವಿರಾಟ್ ಹಾಗೂ ಅವರ ಪೋಷಕರನ್ನು ಗೌರವಿಸಿ, ಸನ್ಮಾನಿಸಲಾಯಿತು.