
“
ಶಾಂತಿನಗರ ರಾಗಿಗುಡ್ಡದಲ್ಲಿ ಅದ್ದೂರಿಯಾಗಿ ಮತ್ತು ಶಾಂತಿಯುತವಾಗಿ ಗಣಪತಿ ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಶಾಂತಿನಗರದ ಒಟ್ಟು 16ಗಣಪತಿಗಳು ಏಕ ಕಾಲಕ್ಕೆ ಮೆರವಣಿಗೆಯಲ್ಲಿ ಸಾಗಿದವು. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಮುಸ್ಲಿಂ ಭಾಂದವರು ಹಿಂದೂಭಾಂದವರಿಗೆ ಸಿಹಿ ಮತ್ತು ತಂಪು ಪಾನೀಯ ವಿತರಣೆಮಾಡಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತಿದ್ದ ದೃಶ್ಯಗಳು ಕಂಡುಬಂದವು.

ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ. ನಿಖಿಲ್ ರವರ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿ ವೈ ಎಸ್ ಪಿ ಸಂಜೀವಕುಮಾರ್ ಸ್ಥಳದಲ್ಲೇ ಮುಕ್ಕಾಮ್ ಮಾಡಿದ್ದರು. ವೃತ್ತ ನಿರೀಕ್ಷಕ ರಾಘವೇಂದ್ರ ಖಂಡಿಕೆ ಶಾಂತಿಯುತ ಮೆರವಣಿಗೆಗಾಗಿ ಹಲವಾರು ಸಭೆಗಳನ್ನು ನಡೆಸಿದ್ದರು.

ಶಾಂತಿನಗರದ ಮುಖಂಡರುಗಳಾದ ನಾಗರಾಜ್ (ಗಾರೆ ), ಶಹಾಬುದ್ದಿನ್ ಬಾಬು,,ಬಸವರಾಜ್, ಸಯ್ಯದ್ ಸಾದಿಕ್,ಮಾರುತಿ, ಶಾಂತಿನಗರ ನಾಗರೀಕ ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ,ಜಯದೇವಪ್ಪ, ರಾಮಚಂದ್ರ ವಕೀಲರು, ನೂರುಲ್ಲ ಖಾನ್, ಕರವೇ ಸಾದಿಕ್, ವಿಕ್ರಂ ಹಾಗೂ ಶಾಂತಿನಗರದ ಎಲ್ಲಾ ಸಮಾಜಗಳ ಮುಖಂಡರುಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು