ಹೊಳೆಹೊನ್ನೂರು,ನ.05:
ಭದ್ರಾ ಮೇಲ್ದಂಡೆ ಯೋಜನೆ ಅಡಿ ನಿರ್ಮಾಣವಾಗಿರುವ ಕಾಲುವೆ ಮೂಲಕ ಹೆಚ್ಚುವರಿ ನೀರನ್ನು ಭದ್ರಾ ಜಲಾಶಯದಿಂದ ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ಪ್ರಮುಖರು ಹಾಗೂ ರೈತರು ಹೊಳೆ ಹೊನ್ನೂರು ಭದ್ರಾವತಿ ಮಾರ್ಗದ ಆಗಸನಹಳ್ಳಿ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದರು.

ಈಗಾಗಲೇ ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಈಗಷ್ಟೇ ನಿರ್ಮಾಣವಾಗಿರುವ ಭದ್ರಾ ಮೇಲ್ದಂಡೆಗೆ ಪದೇ ಪದೇ ಹೇಳಿದ್ದಕ್ಕಿಂತ ಹೆಚ್ಚು ನೀರು ಹರಿಸುತ್ತಿರುವುದು ನಮಗೆ ಮುಂದಿನ ದಿನಮಾನಗಳ ಬಗ್ಗೆ ಭಯ ಹುಟ್ಟಿಸುತ್ತಿದೆ.

ಯಾವುದೇ ಕಾರಣಕ್ಕೂ ಅಲ್ಲಿಗೆ ನೀರನ್ನು ಬಿಡುವುದು ಬೇಡ. ನಮ್ಮ ಅಗತ್ಯ ಪೂರೈಕೆ ನಂತರ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಶವಂತರಾವ್ ಘೋರ್ಪಡೆ, ಯಲ್ಲಪ್ಪ, ಕೃಷ್ಣಮೂರ್ತಿ, ವೆಂಕಟೇಶ್ ಹಾಗೂ ಇತರರು ಉಪಸ್ಥಿತರಿದ್ದರು.