ಶಿವಮೊಗ್ಗ,ಸೆ.11: ನೂತನವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಎಚ್.ಸಿ. ಯೋಗೇಶ್ ಅವರನ್ನು ಜಿಲ್ಲಾ ಎನ್ಎಸ್ಯುಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಎಚ್.ಸಿ. ಯೋಗೇಶ್ ಅವರು ಡಿವಿಎಸ್ ವೃತ್ತದಲ್ಲಿರುವ ಬಸವಣ್ಣನ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಎಸ್.ಪಿ. ದಿನೇಶ್, ಕಾಶಿ ವಿಶ್ವನಾಥ್, ಯಮುನಾ ರಂಗೇಗೌಡ, ಸೈಯದ್, ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಜವಳಿ ನಿಗಮದ ಅಧ್ಯಕ್ಷ ಚೇತನ್, ಮುಖಂಡರಾದ ಚಿರಂಜೀವಿ ಬಾಬು, ಮಧುಸೂದನ್, ಗಿರೀಶ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯ, ಕಾರ್ಯಾಧ್ಯಕ್ಷ ಕಾಟಿಕೆರೆ ರವಿ, ನಗರಾಧ್ಯಕ್ಷ ರವಿಕುಮಾರ್, ಚಂದ್ರೋಜಿರಾವ್ ಸುಭಾನ, ಫಾರಾಜ್, ಆದಿತ್ಯ, ಶ್ರೀಕಾಂತ್, ಪಂಕಜ್ ಹಾಗೂ ಯುವ ಕಾಂಗ್ರೆಸ್ನ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಆಕಾಶ್, ಮಲಗೊಪ್ಪ ಶಿವು, ಬಾಬು, ತೋಫಿಕ್ ಸೇರಿದಂತೆ ಹಲವು ಯುವ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್ ಅವರಿಗೆ ಶುಭ ಹಾರೈಸಿ, ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.