ಶಿವಮೊಗ್ಗ,ಸೆ.11:
ನಗರದ ತುಂಗಾ ನದಿ ಸೇತುವೆ ಮೇಲಿನಿಂದ ಯುವತಿಯೊಬ್ಬಳು ನದಿಗೆ ಜಿಗಿದಿದ್ದು, ಅದೃಷ್ಟವಶಾತ್ ಆಕೆಯನ್ನು ರಕ್ಷಿಸಲಾಗಿದೆ.

ಯುವತಿಯೊಬ್ಬರು ಸಂಜೆ ರೈಲ್ವೆ ಸೇತುವೆ ಮೇಲಿನಿಂದ ತುಂಗಾ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಆಕೆಯು ಬಂಡೆಯೊಂದರ ಬಳಿ ಗಿಡಗಳ ಆಸರೆಯಲ್ಲಿ ನದಿ ಮಧ್ಯೆ ನಿಂತಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ರಬ್ಬರ್ ಬೋಟ್ ಬಳಸಿ ಯುವತಿಯನ್ನು ರಕ್ಷಿಸಿದ್ದಾರೆ.
ಸದ್ಯ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹೆಚ್ ರಾಜು, ಡಿಎಫ್’ಓ ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಮಕ್ದು ಹುಸೇನ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.